ಹಿರಿಯ ನಾಗರಿಕರು, ವಿಶೇಷ ಚೇತನರುಗಳಿಗೆ ಮನೆಯಿಂದಲೇ ಮತದಾನ ಪ್ರಾರಂಭ

ವಿಜಯಪುರ.ಏ೧೪:ಪಟ್ಟಣದ ಜಯ್‌ಮಹಲ್ ಲೇಔಟ್ ಮೊದಲನೇ ಕ್ರಾಸ್‌ನಲ್ಲಿರುವ ಮುನಿವೆಂಕಟಪ್ಪನವರ ಪತ್ನಿ ಮುನಿಯಮ್ಮ ೮೮ ವರ್ಷ ವಯಸ್ಸಿನ ವೃದ್ದೆಗೆ ಮನೆಯಿಂದಲೇ ಮತದಾನ ನಡೆಸಲಾಯಿತು.
ಪಟ್ಟಣದಲ್ಲಿ ಒಟ್ಟಾರೆ ೮ ಮಂದಿ ವೃದ್ಧರು ಹಾಗೂ ಮೂವರು ಮಂದಿ ವಿಶೇಷ ಚೇತನರಿಂದ ಮತದಾನ ಮಾಡುವ ಪ್ರಕ್ರಿಯೆ ನಡೆಯಿತು.
ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಲು ಇಚ್ಚಿಸುವ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಏ.೧೩ ಹಾಗೂ ೧೪ರಂದು ಎರಡು ದಿನ ಮತ ಪಡೆಯುವ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಈ ಪ್ರಕ್ರಿಯೆ ಶನಿವಾರದಂದು ಪ್ರಾರಂಭವಾಯಿತು.
ಹಿರಿಯ ನಾಗರಿಕರು, ವಿಕಲ ಚೇತನರುಗಳು, ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದು ಚುನಾವಣಾ ಆಯೋಗ ಈ ಪ್ರಕ್ರಿಯೆ ರೂಪಿಸಿದ್ದು.
ಹೆಸರು ನೋಂದಾಯಿಸಿಕೊಂಡ ೮೫ ವರ್ಷದ ಮೇಲ್ಪಟ್ಟವರು ಹಾಗೂ ವಿಶೇಷ ಚೇತನ ಮತದಾರರು ಮನೆಯಿಂದಲೇ ಮತದಾನ ಮಾಡಲು ಮತದಾನ ಪ್ರಕ್ರಿಯೆಗೆ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಒಬ್ಬ ಮೈಕ್ರೋ ಅಬ್ಬರ್ವರ್, ಮತಗಟ್ಟೆ ಅಧಿಕಾರಿ, ೨ನೇ ಮತಗಟ್ಟೆ ಅಧಿಕಾರಿ, ಬಿಎಲ್‌ಓ, ಪೊಲೀಸ್ ಹಾಗೂ ವಿಡಿಯೋ ಗ್ರಾಫರ್‌ಗಳು ಇದ್ದರು.
ಈ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ಚಂದ್ರಶೇಖರ್, ಫಸ್ಟ್ ಪೋಲಿಂಗ್ ಆಫೀಸರ್ ಪ್ರವೀಣ್ ಕುಮಾರ್, ಪಿ ಆರ್ ಓ ಸತೀಶ್ ಕುಮಾರ್, ಮೈಕ್ರೋ ಅಬ್ಸರ್ವೆರ್ಸ್ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಸಂತೋಷ್ ಮತ್ತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.