ಹಿರಿಯ ನಾಗರಿಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

ಬೀದರ:ಜ.5:ಹಿರಿಯ ನಾಗರಿಕರು ಪುಸ್ತಕ ಓದುವುದು, ಪ್ರತಿಕೆಓದುವುದು, ಸಂಗೀತ ಕೇಳುವುದು ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡು ಮುಂದುವರೆಸಿಕೊಂಡು ಹೋಗಬೇಕೆಂದು ನಿವೃತ್ತ ಪ್ರಾಚಾರ್ಯರರಾದ ಪ್ರೋ.ಎಸ್.ಬಿ. ಬಿರಾದಾರರವರುಕರೆ ನೀಡಿದರು.ಅವರುಇಂದು ನಗರದಗುರುನಾನಕಕಾಲೋನಿಯಲ್ಲಿರುವಜೈಹಿಂದ ಹಿರಿಯ ನಾಗರಿಕರ ಸಂಘದಿಂದಆರಂಭಿಸಲಾದ “ವಾಚನಾಲಯ / ಗ್ರಂಥಾಲಯ” ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೊಬೈಲ್ ಹಾಗೂ ಇಂಟರ್ನೆಟ ಪ್ರಭಾವದಿಂದ ಹಿರಿಯ ನಾಗರಿಕರಲ್ಲಿ ಪುಸ್ತಕ, ಪತ್ರಿಕೆ, ಮುಂತಾದುವಗಳನ್ನು ಓದುವ ಹವ್ಯಾಸಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರು ಹಾಗೂ ಇತರರಿಗಾಗಿ ದಿನ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದಕ್ಕಾಗಿ “ವಾಚನಾಲಯ / ಗ್ರಂಥಾಲಯ” ವನ್ನು ಆರಂಭಿಸಿರುವುದಿಕ್ಕಾಗಿ ವ್ಯವಸ್ಥೆ ಮಾಡಿದಜೈಹಿಂದ ಹಿರಿಯ ನಾಗರಿಕರ ಸಂಸ್ಥೆಯ ಪ್ರಯತ್ನವನ್ನುಕೊಂಡಾಡಿದರು.
ಸಂಘದಗೌರವಅಧ್ಯಕ್ಷರಾದ ಪ್ರೋ.ದೇವೆಂದ್ರ ಕಮಲ ರವರು ಮಾತನಾಡುತ್ತಾ, ಹಿಂದಿನ ದಿನಗಳಲ್ಲಿ ಮನೆಗಳಲ್ಲಿ ವೈಯಕ್ತಿಕವಾದ ಪುಸ್ತಕದ ಭಂಡಾರವನ್ನೆ ಸಂಗ್ರಹಿಸಿ ಇಡುತ್ತಿದ್ದರು.ಇಂದಿನ ಪೀಳಿಗೆಯಲ್ಲಿ ಅಂತಹ ಚಟುವಟಿಕೆಗಳು ನಸಿಸಿ ಹೊಗುತ್ತಿರುವುದಕ್ಕೆ ವಿಶಾದ ವ್ಯಕ್ತ ಪಡಿಸಿದರು.
ಸಂಘದ ಸಹಕಾರ್ಯದರ್ಶಿ ಹಾಗೂ ವಾಚನಾಲಯದ ರೂವಾರಿಗಳು, ಬಿ.ವಿ.ಬಿ. ಕಾಲೇಜಿನಲ್ಲಿಗ್ರಂಥಪಾಲಕರಾಗಿ ನಿವೃತ್ತಿಗೊಂಡ ಶ್ರೀ.ಎಸ್.ಆರ್.ಬಂಡಿಯವರು ಮಾತನಾಡಿ ಸದ್ಯ 500 ಪುಸ್ತಕಗಳಿಂದ ಆರಂಭವಾದ ಈ “ವಾಚನಾಲಯ / ಗ್ರಂಥಾಲಯ” ದಲ್ಲಿ ಮುಂದಿನ 1 ತಿಂಗಳಲ್ಲಿ 2000 ಪುಸ್ತಕಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿಗಳಾದ ಶ್ರೀ.ವೀರಭದ್ರಪ್ಪಾಉಪ್ಪಿನರವರು ಮಾತನಾಡಿ, ವಾಚನಾಲಯವು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯ ವರೆಗೆಕಾರ್ಯನಿರ್ವಹಿಸುತ್ತದೆ.ಇದರಲ್ಲಿಕನ್ನಡ, ಹಿಂದಿ, ಇಂಗ್ಲೀಷ, ಮರಾಠಿ, ಉರ್ದು, ಹಾಗೂ ತೆಲಗು ಭಾಷೆಯಎಲ್ಲಾತರಹದ ಪುಸ್ತಕಗಳ ಸಂಗ್ರಹವಿದೆ.ಸಂಘದ ಸದಸ್ಯರನ್ನೊಳಗೊಂಡು ಇತರಯಾರೇಆದರೂಉಚಿತವಾಗಿ ವಾಚನಾಲಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸಂಘದಅಧ್ಯಕ್ಷರಾದ ಶ್ರೀ.ಆರ್.ಆರ್. ಮುನಿಗ್ಯಾಲ ರವರುಅಧ್ಯಕ್ಷತೆ ವಹಿಸಿದ್ದರು, ಸಂಘದಉಪಾಧ್ಯಕ್ಷರಾದ ಶ್ರೀ.ವಿಜಯಕುಮಾರ ಸೂರ್ಯಾನರವರು ಅತಿಥಿಗಳನ್ನು ಸ್ವಾಗತಿಸಿದರು.ಶ್ರೀ, ಚಂದ್ರಶೇಖರದೇವಣಿಯವರು ಸ್ವಾಗತಗೀತೆ ಹಾಡಿದರೆ, ಕೊನೆಯಲ್ಲಿ ಸಂಘದಕೋಷಾಧ್ಯಕ್ಷರಾದ ಶ್ರೀ.ಗಂಗಪ್ಪಾ ಸಾವಳೆಯವರು ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಎಸ್.ವಿ. ಕಲಮಠ, ಡಾ. ವಿ.ವಿ. ಗುತ್ತಿ, ರಾಜೇಂದ್ರ ಸಿಂಗ್ ಪವಾರ, ಅರವಿಂದಕುಲಕರ್ಣಿ, ಶಂಕರರಾವಚಿದ್ರಿ, ನಾರಾಯಣರಾವ ಕಾಂಬಳೆ, ಚಂದ್ರಪ್ಪಾ ಬಿರಾದರ್, ಕೆ.ವಿ. ಪಾಟೀಲ್, ಲಲಿತಾಬಾಯಿ ಮುನಿಗ್ಯಾಲ, ಮಹಾಲಿಂಗಪ್ಪಾ ಬೆಲ್ದಾಳೆ, ಸಂಜುಕುಮಾರ ಶೀಲವಂತ, ಶಿವಪುತ್ರ ಮೆಟಗೆ, ರಾಮಚಂದ್ರಗಜರೆ, ಮುಂತಾದವರು ಭಾಗವಹಿಸಿದರು.