ಹಿರಿಯ ನಾಗರಿಕರು ಎಲ್ಲರ ಜೊತೆ ಅನ್ಯೋನ್ಯ ಸಂಬಂಧ ಹೊಂದಿ, ಸದಾ ಕ್ರಿಯಾಶೀಲರಾಗಿರಬೇಕು:ಡಾ. ಎಂ.ಜಿ.ದೇಶಪಾಂಡೆ

ಬೀದರ:ಡಿ.30:ಹಿರಿಯ ನಾಗರಿಕರು ತಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಸಮಾಜದ ಅನ್ಯ ಜನರೊಡನೆ ಸೌಹಾರ್ದ ಯುತ ಬಾಂಧವ್ಯವನ್ನು ಹೊಂದಿರಬೇಕೆಂದು, ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಕರೆ ನೀಡಿದರು. ಅವರು ಇಂದು ಜೈ ಹಿಂದ್ ಹಿರಿಯ ನಾಗರಿಕರ ಸಂಘ ದಲ್ಲಿ ಏರ್ಪಡಿಸಲಾದ “” ಸಮಾಜದಲ್ಲಿ ಹಿರಿಯರ ಪಾತ್ರ”” ಕುರಿತು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ತಮ್ಮ ಅನುಭವವನ್ನು ಕಿರಿಯರಿಗೆ ಅನಾವಶ್ಯಕವಾಗಿ ವಿವರಿಸ ಬೇಕಾಗಿಲ್ಲ, ಅವರಿಗೆ ಅದು ಇಷ್ಟವಾಗುವುದಿಲ್ಲ. ಕುಟುಂ ಬದ ಸದಸ್ಯರ ಮೇಲೆ ವಿನಾ ಕಾರಣ ಅಧಿಕಾರ ಚಲಾಯಿ ಸುವುದನ್ನು ಬಿಟ್ಟು, ಅವರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದರೆ ಅವರಿಂದ ಸಕಾರಾತ್ಮಕ ಸಹಕಾರ ವನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯ ಪಟ್ಟ ರು. ತಮ್ಮ ಹಠಮಾರಿತನವನ್ನು ಬಿಟ್ಟು, ಯೋಗ, ಧ್ಯಾನ, ಪ್ರಾಣಾಯಾಮ
ವನ್ನು ಮಾಡುವ ಮೂಲಕ, ಆರೋಗ್ಯವನ್ನು ಕಾಯ್ದು ಕೊಳ್ಳಬೇಕೆಂದು ಹಿರಿಯರಿ ಗೆ ಕಿವಿಮಾತು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನರವ ರು ನಿರೂಪಿಸಿ, ಸಂಸ್ಥೆಯು ಬರುವ ದಿನಗಳಲ್ಲಿ ನಡೆಸ ಲಿರುವ ಕಾರ್ಯ ಚಟುವಟಿ ಕೆಗಳನ್ನು ವಿವರಿಸಿದರು. ವಿಕಲ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆಯು ನೀಡಿ ರುವ ಗುರುತಿನ ಚೀಟಿಗಳ ನ್ನು ವಿತರಣೆ ಮಾಡಿದರು.
ಉಪಾಧ್ಯಕ್ಷರಾದ ವಿಜಯ ಕುಮಾರ್ ಸೂರ್ಯಾನ್ ರವರು ಮಾತನಾಡಿ, ಅವಿ ಭಕ್ತ ಕುಟುಂಬಗಳು ದಿನೇ ದಿನೇ ಕಡಿಮೆ ಯಾಗುತ್ತಿರು ವುದಕ್ಕೆ ಬೇಸರ ವ್ಯಕ್ತ ಪಡಿಸಿದರು. ಸಸಿಗೆ ನೀರೆರೆ ಯುವ ಮೂಲಕ ಉಪನ್ಯಾ ಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲರವರು ಅಧ್ಯಕ್ಷತೆಯನ್ನು ವಹಿಸಿ ದ್ದರು. ಕೋಶಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ಕೊನೆಯಲ್ಲಿ ವಂದಿಸಿದರು. ರಾಜೇಂದ್ರಸಿಂಗ್ ಪವಾರ, ಕೆ. ವಿ. ಪಾಟಿಲ್, ಮಚೆಂದ್ರ ಏಕಲಾರ್, ಶಿವಪುತ್ರ ಮೆಟ ಗೆ, ಸಿಮ್ರಾನ್, ಎಂ.ಎನ್. ಕುಲಕರ್ಣಿ, ಡಾ. ಸುಭಾಷ್ ಪೆÇೀಲಾ, ಸುಧಾಕರ ಗಾದ ಗಿ, ಅರವಿಂದ ಕುಲಕರ್ಣಿ, ಶಂಕರಾವ ಚಿದರಿ, ರಾಮಕೃ ಷ್ಣನ್ ಸಾಳೆ , ದತ್ತಾತ್ರೆಯ ಕುಲಕರ್ಣಿ, ಮುಂತಾದವ ರು ಭಾಗವಹಿಸಿದ್ದರು. ಸಾಮೂಹಿಕ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತ್ತು.