ಹಿರಿಯ ನಾಗರಿಕರು,ಅಂಗವಿಕಲ ಮತದಾರರು ಮತದಾನದಿಂದ ಹೊರ ಉಳಿಯದಂತೆ ನೋಡಿಕೊಳ್ಳಬೇಕು:ಎಸಿ ಅಬೀದ್ ಗದ್ಯಾಳ

ಇಂಡಿ:ಮಾ.22:ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರು,85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾವುದೇ ಕಾರಣಕ್ಕೆ ಅವರು ಮತದಾನದಿಂದ ವಂಚಿತರಾಗದಂತೆ ಸಂಬಂಧಿಸಿದ ಬಿಎಲ್‍ಒಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮನೆ,ಮನೆಗೆ ತೆರಳಿ ಹಿರಿಯ ನಾಗರಿಕರನ್ನು ಗುರುತಿಸಿ,ಅಂಗವಿಕಲರನ್ನು ಮತದಾನ ಮಾಡಿಸುವ ಕೆಲಸ ಮಾಡಬೇಕು. ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಸಿ ಹಾಗೂ ಸಹಾಯಕ ಚುನಾವಣಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ 85 ವರ್ಷ ಮೆಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರ ಮತದಾನ ಹಾಗೂ ಚುನಾವಣಾ ಬಿಎಲ್‍ಒಗಳ ಕುರಿತು ತಾಲೂಕಿನ ಮತಗಟ್ಟೆ ಅಧಿಕಾರಿಗಳು,ಸೆಕ್ಟರ್ ಅಧಿಕಾರಿಗಳು,ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಕಡ್ಡಾಯವಾಗಿ ಪವಿತ್ರವಾದ ಮತದಾನದಲ್ಲಿ ಪಾಲ್ಗೊಂಡು ಸಂವಿಧಾನದತ್ತವಾದ ಹಕ್ಕನ್ನು ಚಲಾಯಿಸಲು ಅನುಕೂಲ ಮಾಡಿಕೊಡಬೇಕು. ಬಿಎಲ್‍ಒಗಳು ಆ್ಯಪ ಬಳಕೆ ಮಾಡಿಕೊಂಡು ಮತಚಾಯಿಸಲು ಮಾಹಿತಿ ತಿಳಿಹೇಳಬೇಕು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಚುನಾವಣೆಯ ಕರ್ತವ್ಯವನ್ನು ಎಚ್ಚರದಿಂದ ನಿರ್ವಹಿಸಿ,ಮತದಾನದಲ್ಲಿ ಯಾವುದೇ ಲೋಪದೋಷವಾಗದಂತೆ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.
ತಹಶೀಲ್ದಾರ ಮಂಜುಳಾ ನಾಯಕ, ಬಿಇಒ ಟಿ.ಎಸ್.ಆಲಗೂರ,ಕ್ಷೇತ್ರಸಮನ್ವಯಾಧಿಕಾರಿ ನಡಗಡ್ಡಿ,ಗ್ರೇಡ್-2 ತಹಶೀಲ್ದಾರ ಧನಪಾಲಶೆಟ್ಟಿ ದೇವೂರ,ಚುನಾವಣಾ ಶಿರಸ್ತೆದಾರ ಆರ್.ಬಿ.ಮೂಗಿ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪೂರ ಸೇರಿದಂತೆ ಬಿಎಲ್‍ಒಗಳು,ಮತಗಟ್ಟೆ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು,ಕಂದಾಯ ನಿರೀಕ್ಷಕರು,ಗ್ರಾಮ ಆಡಳಿತಾಧಿಕಾರಿಗಳು ತರಬೇತಿ ಸಭೆಯಲ್ಲಿ ಇದ್ದರು.