ಹಿರಿಯ ನಾಗರಿಕರಿಗೆ ಹಣ್ಣು ವಿತರಣೆ

ಬೀದರ್:ಆ.23: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಬೀದರ್‍ನ ಮಹಾತ್ಮ ಜ್ಯೋತಿಬಾ ಫುಲೆ ವೃದ್ಧಾಶ್ರಮದಲ್ಲಿನ ಹಿರಿಯ ನಾಗರಿಕರಿಗೆ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಹಣ್ಣು ಹಾಗೂ ಬಿಸ್ಕತ್ ವಿತರಿಸಲಾಯಿತು.

ಕ್ಲಬ್ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಹಾಗೂ ಡಾ. ಲೋಕೇಶ ಹಿರೇಮಠ ಅವರು ಆರೋಗ್ಯ ಕಾಯ್ದುಕೊಳ್ಳುವ ಕುರಿತು ಹಿರಿಯ ನಾಗರಿಕರಿಗೆ ಸಲಹೆ ನೀಡಿದರು.

ಕ್ಲಬ್ ಉಪಾಧ್ಯಕ್ಷ ಡಾ. ರಿತೇಶ ಸುಲೆಗಾಂವ್, ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಸದಸ್ಯರಾದ ಡಾ. ನಿತೇಶ ಬಿರಾದಾರ, ನಿತಿನ್ ಕರ್ಪೂರ, ಸತೀಶ ಸ್ವಾಮಿ, ಮಹಮ್ಮದ್ ಫರ್ದಿನ್ ಮತ್ತಿತರರು ಇದ್ದರು.