ಹಿರಿಯ ನಾಗರಿಕರರಿಗೆ ಮನೆ ಬಳಿ ಲಸಿಕಾ ಕೇಂದ್ರ

ನವದೆಹಲಿ, ಮೇ.28- ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗಾಗಿ “ಮನೆಯ ಬಳಿ’ಯೇ ಲಸಿಕ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ

ಕೇಂದ್ರದ ಈ ನಿರ್ಧಾರ ದಿಂದ ದೇಶಾದ್ಯಂತ 14 ಕೋಟಿ ಹಿರಿಯ ನಾಗರಿಕರು ಮತ್ತು 2.2 ಕೋಟಿ ದಿವ್ಯಾಂಗರಿಗೆ ಉಪಯುಕ್ತವಾಗಲಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಪಡೆಯುವಲ್ಲಿ ವಿಶೇಷ ಚೇತನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮನವರಿಕೆ ಮಾಡಿಸಿತ್ತು.ಅದನ್ನು ಆಧರಿಸಿ ಈ ನಿರ್ದಾರ ಕೈಗೊಳ್ಳಲಾಗಿದೆ.

ಸ್ವಾಗತಾರ್ಹ: ಕಠಾರಿಯಾ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ಧಾರವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರತನ್ ಲಾಲ್ ಕಠಾರಿಯಾ ಸ್ವಾಗತಿಸಿದ್ದಾರೆ.

ದೆಹಲಿಯ ಏಮ್ಸ್ ಜೆರಿಯಾಟ್ರಿಕ್ ವಿಭಾಗದೊಂದಿಗೆ ಸಮಾಲೋಚಿಸಿ ಸಚಿವಾಲಯ 2021 ಏಪ್ರಿಲ್ 27 ರಂದು ಹಿರಿಯ ನಾಗರಿಕರಿಗಾಗಿ ಕೋವಿಡ್ ಸೂಕ್ತ ನಡವಳಿಕೆಯ ಬಗ್ಗೆ ಸಲಹೆಯನ್ನು ನೀಡಿತ್ತು ಅದರಂತೆ ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ ಹಿರಿಯ ನಾಗರಿಕರು ಮತ್ತು ದಿ್್ಯಾಂವ್ಯಾಂಗರಿಗೆ ಅನುಕುಲವಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಅಗತ್ಯಗಳಿಗ ಸ್ಪಂದನಾತ್ಮಕವಾಗಿದೆ ಮತ್ತು ಪ್ರಸಕ್ತ ಸಾಂಕ್ರಾಮಿಕದ ನಡುವೆಯೂ ಜನರ ಅಗತ್ಯಗಳಿಗೆ ಸ್ಪಂದಿಸಲು ಶ್ರಮವರಿಯದ ದುಡಿಯುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಮಾಜದ ದುರ್ಬಲ ವರ್ಗದವರ ಮತ್ತು ಇತರ ದುರ್ಬಲ ಗುಂಪುಗಳ ಹಿತ ಕಾಯಲು ಬದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

ತೃತೀಯ ಲಿಂಗಿಗಳಿಗೂ ಅನುಕೂಲ:

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತೃತೀಯ ಲಿಂಗಿಗಳ ಸಮುದಾಯದ ಜನರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಹಾಯವಾಣಿಯನ್ನೂ ಆರಂಭಿಸಿದೆ.

ಹೆಚ್ಚು ಅನಿಶ್ಚಿತ ಮತ್ತು ಹೊರಹೊಮ್ಮುತ್ತಿರುವ ಸನ್ನಿವೇಶದಿಂದಾಗಿ ತೀವ್ರವಾದ ಒತ್ತಡಕ್ಕೆ ಒಳಗಾಗಿರುವ ತೃತೀಯ ಲಿಂಗಿ ಗಳಿಗೆ ಮಾನಸಿಕ ತಜ್ಞರಿಂದ ಸಮಾಲೋಚನೆ ಇಲ್ಲಿ ಲಭ್ಯವಿದೆ. 

ಆಯಾ ರಾಜ್ಯ ಸರ್ಕಾರಗಳು ವಿಧಿಸಿರುವ ಲಾಕ್ ಡೌನ್ ನಿರ್ಬಂಧಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತೃತೀಯ ಲಿಂಗಿ ಜನರಿಗೆ ಒಂದು ಬಾರಿಯ ಜೀವನಾಧಾರ ಭತ್ಯೆ 1,500 ರೂ.ಗಳನ್ನು ಪ್ರಕಟಿಸಿರುವುದಾಗಿ ಸಚಿವಾಲಯ ತಿಳಿಸಿದೆ. ಕಳೆದ ವರ್ಷವೂ ಮಧ್ಯಂತರ ಪರಿಹಾರವಾಗಿ ಆರ್ಥಿಕ ನೆರವು ನೀಡಲಾಗಿತ್ತು, ಆಗ 7000 ತೃತೀಯ ಲಿಂಗಿ ಸಮುದಾಯದವರು ಇದರ ಪ್ರಯೋಜನ ಪಡೆದಿದ್ದರು.

ತೃತೀಯ ಲಿಂಗಿಗಳಿಗೆ ಕೋವಿಡ್, ಲಸಿಕೆ ಕಾರ್ಯಕ್ರಮ ಕುರಿತಂತೆ ಸ್ಥಳೀಯ ಭಾಷೆಯಲ್ಲಿ ಜಾಗೃತಿ ಮೂಡಿಸಲು, ಹಾಲಿ ಲಸಿಕಾ ಕೇಂದ್ರಗಳನ್ನು ತೃತೀಯ ಲಿಂಗಿಸ್ನೇಹಿ ಮಾಡಿ, ತೃತೀಯ ಲಿಂಗಿ ಸಮುದಾಯದವರಿಗೆ ಲಸಿಕೆ ನೀಡಲು ಪ್ರತ್ಯೇಕ ಶಿಬಿರ ಆಯೋಜಿಸಲು ಮತ್ತು ಸಂಚಾರಿ ಬೂತ್ ತೆರೆಯುವಂತೆ ಮನವಿ ಮಾಡಿದೆ ಎಂದೂ ತಿಳಿಸಿದ್ದಾರೆ.