ಹಿರಿಯ ನಟ ದ್ವಾರಕೀಶ್ ಪತ್ನಿ ‌ಅಂಬುಜಾ ನಿಧನ

ಬೆಂಗಳೂರು, ಏ.16- ಕನ್ನಡ ಚಿತ್ರರಂಗದ ಕುಳ್ಳ ಎಂದೇ ಖ್ಯಾತಿ ಪಡೆದಿರುವ ಹಿರಿಯ ನಟ ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಇಂದು ನಿಧನರಾಗಿದ್ದಾರೆ.

ಅಂಬುಜಾ ಅವರಿಗೆ 80 ವರ್ಷ ವಯಸ್ಸಾಗಿತ್ತು, ಪತಿ ದ್ವಾರಕೀಶ್ ಹಾಗೂ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ‌ ಅಂಬುಜಾ ನಿಧನರಾಗಿದ್ದಾರೆ ಎನ್ನುವ ಸಂಗತಿಯನ್ನು ಅವರ ಪುತ್ರ ಯೋಗಿ ದ್ವಾರಕೀಶ್ ಖಚಿತಪಡಿಸಿದ್ದಾರೆ

ಎಚ್ಎಸ್ಆರ್ ಲೇಔಟ್ ನಿವಾಸದಲ್ಲಿ ನಿಧನರಾಗಿದ್ದು ಸಂಜೆ ವೇಳೆಗೆ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಹಿರಿಯ ನಟ ದ್ವಾರಕೇಶ್ ಅವರ ಏಳು ಬೀಳುಗಳಲ್ಲಿ ಜೊತೆಯಾಗಿ ನಿಂತಿದ್ದರು. ಚಿತ್ರಗಳಲ್ಲಿ ಅವರು ಸೋತಾಗ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುವ ಜೊತೆಗೆ ಸದಾ ಅವರ ಬೆನ್ನೆಲುಬಾಗಿ ನಿಂತಿದ್ದಾರೆ.

ಸಂತಾಪ:

ಕನ್ನಡ ಚಿತ್ರರಂಗದ ಹಿರಿಯ ನಟ ನಿರ್ಮಾಪಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.

ಪತ್ನಿಯ ಅಗಲಿಕೆಯ ನೋವಿನಲ್ಲಿರುವ ದ್ವಾರಕೀಶ್ ಮತ್ತು ಅವರ ಪುತ್ರರಿಗೆ ಚಿತ್ರರಂಗದ ಅನೇಕರು ಸಾಂತ್ವನ ಹೇಳಿದ್ದಾರೆ.