ಹಿರಿಯ ನಟ‌‌‌ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಬಿಡುಗಡೆ

ಹೈದರಾಬಾದ್: ಬಾಲಿವುಡ್ ನ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಉಸಿರಾಟದ ತೊಂದರೆಯಿಂದ‌ ಬಳಲುತ್ತಿದ್ದ 98 ವರ್ಷದ ನಟ ದಿಲೀಪ್ ಕುಮಾರ್, ಐದು ದಿನಗಳ ಹಿಂದೆ ಇಲ್ಲಿನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವಡೆಯುತ್ತಿದ್ದರು. ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.
ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರಾರ್ಥನೆಯೊಂದಿಗೆ, ಈ ದಿಲೀಪ್ ಸಾಬ್‌ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾನೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯ ಯಾವಾಗಲೂ ಸಾಹೇಬ್‌ನ ಹೃದಯದಲ್ಲಿರುತ್ತದೆ ಎಂದು ದಿಲೀಪ್‌ ಕುಮಾರ್ ಅವರ ಟ್ವಿಟರ್ ನಿರ್ವಹಿಸುವವರು ಪೋಸ್ಟ್‌ ಮಾಡಿದ್ದಾರೆ.
ಈ ಟ್ವೀಟ್‌ ಅನ್ನು ಅನೇಕ ಅಭಿಮಾನಿಗಳು, ವಿಶೇಷವಾಗಿ ಸಿನಿಮಾ ಕ್ಷೇತ್ರದ ಗಣ್ಯರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದಿಲೀಪ್ ಕುಮಾರ್ ಅವರನ್ನು ನಿನ್ನೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರ ಕುಟುಂಬದ ಸದಸ್ಯರು ಮತ್ತು ಕುಟುಂಬದ ವೈದ್ಯರ ಸಲಹೆ ಮೇರೆಗೆ ಅವರನ್ನು ಇನ್ನೊಂದು ದಿನ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲು ತೀರ್ಮಾನಿಸಲಾಗಿತ್ರು. ಹೀಗಾಗಿ ಹಿರಿಯ ನಟ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.