ಹಿರಿಯ ನಟಿ ಪ್ರತಿಮಾದೇವಿ ನಿಧನ

ಬೆಂಗಳೂರು, ಏ.6- ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ ಇಂದು ನಿಧನರಾಗಿದ್ದಾರೆ.

ಅವರಿಗೆ 88 ವರ್ಷ ವಯಸ್ಸಾಗಿತ್ತು 9ಕ್ಕೆ ಅವರು ವರ್ಷಕ್ಕೆ 89 ನೇ ಪಾದಾರ್ಪಣೆ ಮಾಡುವರಿದ್ದರು.

ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ತಾಯಿ ಪ್ರತಿಮಾದೇವಿ. ರಾಜೇಂದ್ರ ಸಿಂಗ್ ಬಾಬು ಅವರಲ್ಲದೆ ಸಂಗ್ರಾಮ್ ಸಿಂಗ್ ಜೈರಾಜ್ ಸಿಂಗ್ ಹಾಗೂ ನಟಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ 4 ಮಕ್ಕಳು.

ಮೈಸೂರಿನ ನಿವಾಸಕ್ಕೆ ಕೊಂಡೊಯ್ದಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪುತ್ರಿ ಹಾಗೂ ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.

ಪ್ರತಿಮಾದೇವಿ ಅವರು ಸುಮಾರು 60ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಾಯಕಿ ಸೇರಿದಂತೆ ವಿವಿಧ ಪಾತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದರು.

ಪ್ರತಿಮಾದೇವಿ ಅವರ ಮಕ್ಕಳ ಪೈಕಿ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮತ್ತು ಪುತ್ರಿ ಹಾಗೂ ನಟಿ ವಿಜಯಲಕ್ಷ್ಮಿ ಸಿಂಗ್ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಂತಾಪ:

ಹಿರಿಯ ನಟಿ ಪ್ರತಿಮಾದೇವಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ