ಹಿರಿಯ ನಟಿ‌‌ ಸುರೇಖ ನಿಧ‌ನ, ಅಂತ್ಯಕ್ರಿಯೆ

ಬೆಂಗಳೂರು, ಜೂ.6- ಹೃದಯಾಘಾತದಿಂದ‌ ರಾತ್ರಿ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗು ಭರತ ನಾಟ್ಯ ಕಲಾವಿದೆ ಸುರೇಖ ಅಂತ್ಯಕ್ರಿಯೆ ಇಂದು ನೆರವೇರಿತು.

ಅವರಿಗೆ 69 ವರ್ಷ ವಯಸ್ಸಾಗಿತ್ತು .ಡಾ.‌ರಾಜ್ ಕುಮಾರ್ ಅವರ ಅನೇಕ ಚಿತ್ರಗಳೂ ಸೇರಿದಂತೆ ಸರಿ‌ಸುಮಾರು‌160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಅಪರೇಷನ್ ಜಾಕ್ ಪಾಟ್ , ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮೊದಲಾದ ಚಿತ್ರಗಳ ವಿಶಿಷ್ಟ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.

ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಅಲೆಮನೆ, ನಾಗರ ಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ ಮೊದಲಾದವು ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಒಟ್ಟು 160ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸುರೇಖಾ ‘ಮಾಯಾ ಮನುಷ್ಯ’ ಮತ್ತು ‘ನಾನು ಬಾಳಬೇಕು’ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ನಟನಯ ಮೂಲಕ ಎಲ್ಲರ ಆಕರ್ಷಣೆ ಪಡೆದಿದ್ದರು.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ‘ನಾನು ಅವನಿಲ್ಲೈ’ ಚಿತ್ರದಲ್ಲಿ ನಾಯಕಿಯಾಗಿ ಅವರು ನೀಡಿದ ಅಭಿನಯ ಅವಿಸ್ಮರಣೀಯವಾಗಿದೆ‌

ಸಂತಾಪ:

ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ