ಹಿರಿಯ ನಟಿಯರಿಗೆ ಗೌರವ

ಕನ್ನಡ ಚಿತ್ರರಂಗದಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಚಂದನವನದಲ್ಲಿ ಸೇವೆ ಸಲ್ಲಿಸಿ ಇದೀಗ ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಟಿಯರನ್ನು ಗೌರವಿಸಲಾಗಿದೆ

ಹಲವು ನಟ ನಟಿಯರಿಗೆ ಸ್ಪೂರ್ತಿಯಾಗಿ, ಜೀ಼ ಧಾರಾವಾಹಿಗಳಲ್ಲೂ ಮಿಂಚುತ್ತಿರುವ ಹಿರಿಯ ನಟಿಯರಾದ ಪದ್ಮಾ ವಾಸಂತಿ, ಸುಧಾರಾಣಿ, ವಿನಯಾ ಪ್ರಸಾದ್, ವಿಜಯಲಕ್ಷ್ಮೀ ಸಿಂಗ್ ಮತ್ತು ಈಗ ಹೊಸದಾಗಿ ಜೀ಼ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರುವ ಉಮಾಶ್ರೀ ಅವರನ್ನ “ಜೀ಼ ಶಕ್ತಿ” ಎಂದು ಪರಿಗಣಿಸಿ ಗೌರವಿಸಿದ್ದಾರೆ.

ಅಷ್ಟೇ ಅಲ್ಲದೇ, ಜೀ಼ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ʼಹಿಟ್ಲರ್‌ ಕಲ್ಯಾಣʼ ಹಾಗು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರಾವಾಹಿಯ ಮಾಹಿತಿ ನೀಡುತ್ತಾರೆ.

ಭರಪೂರ ಮನರಂಜನೆ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.30 ರಿಂದ 10.30 ರ ವರೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.

ಕನ್ನಡದಲ್ಲಿ ಯುಗಾದಿ ಪ್ರಯುಕ್ತ “ ಕುಟುಂಬ ಉತ್ಸವ” ಕನ್ನಡ ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಸಾಹಸಕ್ಕೆ ಕೈ ಹಾಕಿದೆ. ಎಲ್ಲಾ ಧಾರಾವಾಹಿಗಳ ಕಲಾವಿದರು ಮಾತು, ಹಾಸ್ಯ, ನೃತ್ಯ, ಮತ್ತು ಆಟಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸಲಿದ್ದಾರೆ.

ವಿಭಿನ್ನ, ವಿನೂತನ, ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಕನ್ನಡ ವಾಹಿನಿ, ಕುಟುಂಬ ಉತ್ಸವದಲ್ಲೂ ಹಲವು ವಿಶೇಷತೆಗಳನ್ನ ಮೆರೆದಿದೆ.

ಅದೇ ಮಹಾಪ್ರೋಮೋ ಪ್ರಸಾರ. ಮಹಾಪ್ರೋಮೋ – ಸಾಮಾನ್ಯವಾಗಿ ಧಾರಾವಾಹಿಗಳ ಕತೆಯಲ್ಲಿ ನಾಳೆ ಏನಾಗಬಹುದು ಎಂದು, ಹಿಂದಿನ ದಿನದ ಪ್ರೋಮೋಗಳ ಮೂಲಕ ನೋಡತ್ತಿದ್ದ ವೀಕ್ಷಕರಿಗೆ, ಕತೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಮುಂದೆ, ಕತೆಯ ತಿರುವು ಯಾವ ದಿಕ್ಕಿಗೆ ಸಾಗುತ್ತದೆ ಎಂಬ ವೀಕ್ಷಕರ ಕೂತೂಹಲಕ್ಕೆ ಉತ್ತರ ನೀಡುವ ಪ್ರೋಮೋನೇ ಈ ಮಹಾ ಪ್ರೋಮೋ.ಈ ಧೈರ್ಯ, ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಮೊದಲಾಗಿದೆ