ಹಿರಿಯ ಚೇತನಗಳ ಸ್ಮರಣೆ

ಧಾರವಾಡ,ಜು22: ಕಡಪಾ ರಾಘವೇಂದ್ರರಾಯರನ್ನು ಸ್ಮರಿಸಿಕೊಳ್ಳುವುದೆಂದರೆ ಕರ್ನಾಟಕ ವಿದ್ಯಾವರ್ಧಕ ಸಂಘದ ಇತಿಹಾಸವನ್ನು ಹೇಳಿದಂತೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಇತಿಹಾಸವನ್ನು ಹೇಳಲು ಹೊರಟರೆ ಕರ್ನಾಟಕ ಏಕೀಕರಣ ಇತಿಹಾಸ ಹೇಳಿದಂತೆ, ಕನ್ನಡ ನಾಡಿನ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದೆಂದರೆ ಕರ್ನಾಟಕದ ಇತಿಹಾಸವನ್ನು ತೆರೆದಿಟ್ಟಂತೆ ಎಂದು ಹಿರಿಯರಂಗ ಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ 133 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 2ನೇ ದಿನದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಹಿರಿಯ ಚೇತನಗಳ ಸ್ಮರಣೆಯಲ್ಲಿ `ನೆನೆ ನೆನೆ ಆ ದಿನ -ಕಡಪಾ ರಾಘವೇಂದ್ರರಾಯರು’ ಕುರಿತು ಸ್ಮರಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಕರ್ನಾಟಕತ್ವದ ಚಳುವಳಿಯಲ್ಲಿ ಸಂಸ್ಕøತಿ, ಭಾಷೆರಾಜಕೀಯ, ಹೀಗೆ ಹಲವು ವಿಭಾಗಗಳಲ್ಲಿ ಚಳುವಳಿಯಾಗಿ ಕಾರ್ಯ ಮಾಡುತ್ತಿದ್ದವು.ಕಡಪಾರಾಘವೇಂದ್ರರಾಯರು ಕೇವಲ 43 ವರ್ಷಗಳ ಕಾಲ ಮಾತ್ರ ಬದುಕಿದ್ದರೂ ಕೇವಲ ಹತ್ತು ಹನ್ನೆರಡು ವರ್ಷಗಳ ಅವರ ಹೋರಾಟದಜೀವನ ಬಹುಮುಖ್ಯವಾಗಿದ್ದವು.ಕರ್ನಾಟಕಏಕೀಕರಣ ಚಳುವಳಿಗೆ ಆಲೂರ ವೆಂಕಟರಾಯರಿಗಿಂತ ಹೆಚ್ಚು ದುಡಿದವರು.ಶ್ರೇಷ್ಠ ವಾಗ್ಮಿಯಾಗಿದ್ದಕಡಪಾರಾಘವೇಂದ್ರರಾಯರುಈಗಿರುವಕಡಪಾ ಬಯಲು ಪ್ರದೇಶದಲ್ಲಿ ನೂರಾರು ಸಾರ್ವಜನಿಕರು ಭಾಷಣ ಮಾಡಿದ್ದರಿಂದ ಆ ಮೈದಾನಕ್ಕೆ ಸಾರ್ವಜನಿಕರೇಕಡಪಾ ಮೈದಾನಎಂದುಕರೆದರುಎಂದರು.
ಕನ್ನಡತ್ವದ ಚಳುವಳಿಯನ್ನು ಮತ್ತುಕರ್ನಾಟಕಏಕೀಕಣ ಚಳುವಳಿಯನ್ನು ಸಪ್ತರ್ಷಿಗಳಾಗಿ ದುಡಿದವರೆಂದರೆಆಲೂರ ವೆಂಕಟರಾವ, ನಾರಾಯಣರಾವಕರಗುದರಿ, ಕಡಪಾರಾಘವೇಂದ್ರರಾಯ, ಮುದುವೀಡುಕೃಷ್ಣರಾಯರು, ಮುದುವೀಡು ವೆಂಕಟರಾಯರು, ನರಗುಂದದ ಶಾಮರಾಯರು, ನಾರಾಯಣರಾವದೇಶಪಾಂಡೆ ಈ ಎಲ್ಲ ಮಹನೀಯರು ಗುಂಪು ಕಟ್ಟಿಕೊಂಡು ಬೇರೆ ಬೇರೆರೀತಿಯಲ್ಲಿಕನ್ನಡತ್ವಕ್ಕಾಗಿ ಸಂಘಟನೆಗಳನ್ನು ಹುಟ್ಟುಹಾಕಿದುಡಿದರು. ಇವರೆಲ್ಲರಿಗೂ ಮುಂಚೂಣಿಯಲ್ಲಿ ನಿಂತುದುಡಿದವರೆಂದರೆಕಡಪಾರಾಘವೇಂದ್ರರಾಯರು.
ಕಡಪಾರಾಘವೇಂದ್ರರಾಯರು ವಕೀಲಿ ವೃತ್ತಿ ಬಿಟ್ಟುಕನ್ನಡತ್ವ ಚಳುವಳಿಯಲ್ಲಿ ತೊಡಗಿಸಿಕೊಂಡರು.ಅಖಂಡಕರ್ನಾಟಕದ ಚಳುವಳಿಯಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದರು.ಅಕ್ಷರದಅರಿವಿಲ್ಲದ ಆಗಿನ ಕಾಲಘಟ್ಟದಲ್ಲಿಒಂದು ಲಕ್ಷ ಸಹಿ ಮಾಡಿಸಿ, ಕನ್ನಡಅಖಂಡತ್ವಕ್ಕೆ ಒತ್ತಾಯಿಸಿದರು. ಉದ್ಯೋಗಕ್ಕಾಗಿಆಂಧ್ರದಕಡಪಾದಿಂದ ಬಂದರಾಘವೇಂದ್ರರಾಯರು ಪ್ರಾರಂಭದಲ್ಲಿ ಶಿಕ್ಷಕರಾಗಿ, ನಂತರ ವಕೀಲರಾಗಿ ವೃತ್ತಿ ಮಾಡಹತ್ತಿದರು.ಮೊದಲುರಾಷ್ಟ್ರದ ಏಳಿಗೆ, ನಂತರ ಪ್ರಾಂತದ ಹಿತಚಿಂತನೆಕಡಪಾರಾಘವೇಂದ್ರರಾಯರಚಿಂತನೆಯಾಗಿತ್ತು, ಈ ನಿಟ್ಟಿನಲ್ಲಿ ಅಹರ್ನಿಶಿ ದುಡಿದರುಎಂದರು.
ಸಂಘದ ಗೌರವ ಉಪಾಧ್ಯಕ್ಷರಾದ ಡಾ.ಆನಂದ ಪಾಂಡುರಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಹಿರಿಯ ಆಜೀವ ಸದಸ್ಯರಾದ ಹುಬ್ಬಳ್ಳಿಯ ಶೋಭನಾ ಅಶೋಕ ಪಾಟೀಲ, ಬೆಳಗಾವಿಯ ಪ್ರೊ.ಅರವಿಂದ ನಾಯಕ ಹಾಗೂ ಹುಬ್ಬಳ್ಳಿಯ ಅಶೋಕ ಪುಟ್ಟಪ್ಪ ಪಾಟೀಲ ಅವರನ್ನು ಗೌರವಿಸಲಾಯಿತು. ಹಿರಿಯ ಚಿಂತಕ ಸೇತುರಾಮ ಹುನಗುಂದ ಹಿರಿಯ ಆಜೀವ ಸದಸ್ಯರನ್ನು ಗೌರವಿಸಿದರು. ಗೌರವ ಸ್ವೀಕರಿಸಿದ ಮೂವರು ಅನಿಸಿಕೆ ಹಂಚಿಕೊಂಡು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಪ್ರಾರಂಭದಲ್ಲಿ ಹನುಮಂತ ಪಾದಗಟ್ಟಿ ಹಾಗೂ ತಂಡದವರಿಂದ ಸುಗಮ ಸಂಗೀತ ಜರುಗಿತು.ಕೊನೆಯಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಧಾರವಾಡದ ಶ್ರೀಧರ ಭಜಂತ್ರಿಅವರಿಂದ ಶಹನಾಯಿ ವಾದನ ಹಾಗೂ ಶಿವಾಂಗಿ ಯು.ಎಸ್. ಮತ್ತು ಅಪೂರ್ವಾ ಪಾಟೀಲ, ಧಾರವಾಡ ಅವರಿಂದ ಭರತನಾಟ್ಯ ಸೊಗಸಾಗಿ ಮೂಡಿ ಬಂದವು.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಡಾ. ಸಂಜೀವಕುಲಕರ್ಣಿ, ವಿಶ್ವೇಶ್ವರಿ ಬ. ಹಿರೇಮಠ, ಡಾ.ಮಹೇಶ ಹೊರಕೇರಿ, ಡಾ.ಧನವಂತ ಹಾಜವಗೋಳ, ಡಾ. ಆನಂದ ಪಾಟೀಲ, ನಿಂಗಣ್ಣಕುಂಟಿ, ಜಿ.ಬಿ. ಹೊಂಬಳ, ಶಿವಣ್ಣ ಬೆಲ್ಲದ, ವಸಂತ ಮುರ್ಡೇಶ್ವರ, ಕೆ.ಎಚ್. ನಾಯಕ, ಬಿ.ಜಿ. ಬಾರ್ಕಿ, ಎಸ್.ಎಂ.ದಾನಪ್ಪಗೌಡರ, ಕೆ.ಎಂ. ಕೊಪ್ಪದ, ಶಶಿಧರ ಉಜ್ಜಿನಿ, ಡಾ.ಪಾರ್ವತಿ ಹಾಲಭಾವಿ, ಪ್ರತಿಭಾಕುಲಕರ್ಣಿ, ಆಶಾ ಸೈಯದ, ನಂದಾ ಗುಳೇದಗುಡ್ಡ, ಸವಿತಾಕುಸುಗಲ್, ಜ್ಯೋತಿ ಭಾವಿಕಟ್ಟಿ, ಜಯಶೀಲಾ ಬೆಳಲದವರ, ಎಂ.ಎಂ.ಚಿಕ್ಕಮಠ, ಕೆ.ಎಚ್. ನಾಯಕ, ಪ್ರಕಾಶ ಮಲ್ಲಿಗವಾಡ, ರಾಮಚಂದ್ರಧೋಂಗಡೆ ಸೇರಿದಂತೆಅನೇಕರು ಭಾಗವಹಿಸಿದ್ದರು.