ಹಿರಿಯ ಚೇತನಗಳ ಸ್ಮರಣೆ ಕಾರ್ಯಕ್ರಮ

ಧಾರವಾಡ,ಜು.24: ಇಡೀ ರಾಜ್ಯದೊಳಗೆ ಕನ್ನಡದ ನುಡಿಗಾಗಿ ಕನ್ನಡದ ಭಾμÉಗಾಗಿ ಅದನ್ನು ಉಳಿಸಿ ಬೆಳಸಲಿಕ್ಕೆ ನಿರಂತರ ಪ್ರಯತ್ನ ಮಾಡಿದ್ದು ಎಂದರೆ ಕರ್ನಾಟಕ ವಿದ್ಯಾವರ್ಧಕ ಸಂಘದವರು ಎಂಬುವುದನ್ನು ಯಾರೂ ಮರೆಯಬಾರದು ಎಂದು ಕರ್ನಾಟಕ ಸರಕಾರದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ 133 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 4 ನೇ ದಿನದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಹಿರಿಯ ಚೇತನಗಳ ಸ್ಮರಣೆಯಲ್ಲಿ ‘ನೆನೆ ನೆನೆ ಆ ದಿನ – ಡೆಪ್ಯುಟಿ ಚೆನ್ನಬಸಪ್ಪನವರು’ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಎಸ್.ವಿ. ಸಂಕನೂರ, ಕನ್ನಡ ನೆಲವನ್ನು ಶ್ರೀಮಂತಗೊಳಿಸಿದ ಚೇತನಗಳನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ನೆನೆ ನೆನೆ ಆ ದಿನವ ಕಾರ್ಯಕ್ರಮ ರೂಪಿಸಿದ್ದು ನಿಜವಾದ ಕನ್ನಡ ಬೆಳೆಸುವ ಮತ್ತು ಸಂಸ್ಕøತಿ ಉಳಿಸುವ ಕಾಯಕವನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡುತ್ತಿದೆ. ಬಡತನ ಸಾಧನೆ ಮಾಡಲಿಕ್ಕೆ ಎಂದೂ ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ಡೆಪ್ಯುಟಿ ಚೆನ್ನಬಸಪ್ಪನವರು ಉದಾಹರಣೆಯಾಗಿ ನಿಲ್ಲುತ್ತಾರೆ.
ಇನ್ನು ಮುಂದೆ ವಿದ್ಯಾವರ್ಧಕ ಸಂಘದ ಮುಂದೆ ಸವಾಲುಗಳು ಬಹಳ ಎದುರಿಗಿವೆ. ನಮ್ಮ ರಾಜ್ಯದಲ್ಲಿ ಐಎಎಸ್, ಐಪಿಎಸ್‍ದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದೆ. ನಿಜವಾಗಿ ಆಡಳಿತ ನಡೆಸುವವರು ರಾಜಕಾರಣಿಗಳಲ್ಲ ಐಎಎಸ್, ಐಪಿಎಸ್ ಅಧಿಕಾರಿಗಳು, ಸಂಘವು ಯಾಕೆ ನಮ್ಮ ಜನರು ಐಎಎಸ್, ಐಪಿಎಸ್, ಯುಪಿಎಸ್‍ದಲ್ಲಿ ಕಡಿಮೆ ಇದ್ದಾರೆ ಅಂಕಿ ಸಂಖ್ಯೆ ಕಲೆ ಹಾಕಿ, ಅದಕ್ಕೆ ಕಾರಣಗಳನ್ನು ಕಂಡು ಹಿಡಿಯುವ ಕೆಲಸವನ್ನು ಸಂಘ ಮಾಡಬೇಕಾಗಿದೆ. ಇನ್ನು ಸ್ವಲ್ಪ ದಿನದೊಳಗೆ ಕನ್ನಡ ಶಾಲೆಗಳು ಗ್ರಾಮೀಣದಲ್ಲಿ ಮುಚ್ವುತ್ತಿವೆ. ಎರಡು ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. ಪಕ್ಕದ ಶಾಲೆಗಳು ವಿಲಿನಗೊಳಿಸುವ ಚಿಂತನೆ ಸರಕಾರದ ಒಳಗೆ ನಡೆದಿದೆ. ಇಂಥ ಸ್ಥಿತಿ ಬಂದರೆ ಕನ್ನಡ ಶಾಲೆಗಳೆಲ್ಲವೂ ಮುಚ್ವಿ ಹೋಗುತ್ತವೆ. ಕನ್ನಡಕ್ಕೆ ಕಂಟಕ ಬರುತ್ತದೆ. ವಿದ್ಯಾವರ್ಧಕ ಸಂಘ ಕನ್ನಡ ಶಾಲೆಗಳನ್ನು ಉಳಿಸಲು ಮುಂದೆ ನಿಲ್ಲುವದನ್ನು ಸವಾಲಾಗಿ ಸ್ವೀಕರಿಸಿ ಕನ್ನಡ ಶಾಲೆಗಳ ಉಳಿವಿಗೆ ಏನು ಮಾಡಲು ಸಾಧ್ಯ ಎಂಬುದಕ್ಕೆ ಚಿಂತನೆ ಪ್ರಾರಂಭಿಸಲಿ. ಸಂಘದ ಪ್ರಯತ್ನದಲ್ಲಿ ನಾನೂ ಭಾಗವಹಿಸುವೆ. ಟೀಚರ್ಸ ಟ್ರೇನಿಂಗ್ ಸೆಂಟರ್‍ಗಳು ಬಂದಾಗುತ್ತಿದ್ದಾವೆ. ಐತಿಹಾಸಿಕ ಟ್ರೇನಿಂಗ್ ಸೆಂಟರ್ ಉಳಿಯುವಂತೆ ಮಾಡುವ ಭರವಸೆ ನೀಡುವೆ ಎಂದರು.
ಧಾರವಾಡದ ಡೆಪ್ಯುಟಿ ಚನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಅಧ್ಯಕ್ಷರಾದ ಡಾ. ಗುರುಮೂತಿ ಯರಗಂಬಳಿಮಠ ‘ನೆನೆ ನೆನೆ ಆ ದಿನ – ಡೆಪ್ಯುಟಿ ಚೆನ್ನಬಸಪ್ಪನವರು’ ಸ್ಮರಣೆ ಮಾಡುತ್ತಾ ಮಾತನಾಡಿ, ಧಾರವಾಡದ ನೆಲ ಕನ್ನಡದ ಪ್ರದೇಶವಾಗಿ ಉಳಿಯುವುದಕ್ಕೆ ಕನ್ನಡದ ಮುದ್ರೆಯನ್ನು ಒತ್ತಿದವರಲ್ಲಿ ಡೆಪ್ಯುಟಿ ಚೆನ್ನಬಸಪ್ಪವರು ಮೊದಲಿಗರಾಗುತ್ತಾರೆ. ಎಲ್ಲಿಯೂ ಶಾಲೆಗಳು ಇಲ್ಲದಾಗ ಮಠದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ. ಪುಣಾದಲ್ಲಿ ಮೆಟ್ರಕ್ಯುಲೇಶನ್ ಮಾಡುತ್ತಾರೆ. ಮುಂದೆ ಇಂಜನಿಯರಿಂಗ್ ಮಾಡುತ್ತಾರೆ. ರೆಸೆಲ್ ಅವರು ಬಂದ ಬಳಿಕ ಡೆಪ್ಯುಟಿ ಚೆನ್ನಬಸಪ್ಪ ಅವರಿಗೆ ಕನ್ನಡದ ಬಗ್ಗೆ ಮತ್ತು ಕನ್ನಡ ಕಲಿಸುವ ಶಿಕ್ಷಕರ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ರೆಸೆಲ್ ವಿಶೇಷ ಕಾಳಜಿಯಿಂದ ಕನ್ನಡ ಪ್ರದೇಶ ವಿಸ್ತರಿಸುವಂತಾಯಿತು ಎಂದರು.
ಅಂದು ಶಿಕ್ಷಕರಿಗೆ ಪಂತೋಜಿಗಳೆಂದು ಕರೆಯುತ್ತಿದ್ದರು. ಅಂದು ಆಹಿತ್ಯ ವಿಸ್ತರಣೆಗೆ 1865ರಲ್ಲಿ ಮಠ ಪತ್ರಿಕೆ ಪ್ರಾರಂಭ ಮಾಡಿದರು. ಈ ಪತ್ರಿಕೆ ಆಶಯ ಜನರ ಹತ್ತಿರ ಕನ್ನಡ ಸಾಹಿತ್ಯ ಹೋಗಬೇಕು ಎಂಬ ಬಯಕೆಯಾಗಿತ್ತು. ಈ ಕರ್ನಾಟಕ ಸೀಮೆಯಲ್ಲಿ ಶುದ್ಧ ಕನ್ನಡ ಇರಬೇಕು. 1865ರಲ್ಲಿಯೇ ಕರ್ನಾಟಕ ಪದ ಪ್ರಯೋಗ ಮಾಡಿದ ಶ್ರೇಯಸ್ಸು ಡೆಪ್ಯುಟಿ ಚೆನ್ನಬಸಪ್ಪ ಅವರಿಗೆ ಸಲ್ಲಬೇಕೆಂದರು.
ಅಂದು ಕನ್ನಡ ಬರವಣಿಗೆಯನ್ನು ಮಾಡುವುದಕ್ಕೆ ಜನ ಹೆದರುತ್ತಿದ್ದರು. ಮಠ ಪತ್ರಿಕೆ ಮೂಲಕ ಮಾಸ್ತರ ಜನರು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಣೆ ನೀಡುವ ಬರವಣಿಗೆ ಮತ್ತು ಸುತ್ತೋಲೆ, ಆದೇಶಗಳನ್ನು ಶಿಕ್ಷಕರಿಗೆ ತಲುಪುವಂತೆ ಮಠ ಪತ್ರಿಕೆ ಮೂಲಕ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂದು ಕನ್ನಡ ಆಡಳಿತ ಭಾμÉಯಾಗುವುದಕ್ಕೆ ಮಾಡುವ ಪ್ರಯತ್ನವನ್ನು ಅಂದೇ ಚೆನ್ನಬಸಪ್ಪನವರು ಆಡಳಿತವನ್ನು ಕನ್ನಡದಲ್ಲಿಯೇ ನಡೆಯುವಂತೆ ಮಾಡಿದ್ದರು. ಇಂದು ಡಿ.ಎಸ್.ಇ.ಆರ್.ಟಿ ಮಾಡುವ ಕೆಲಸವನ್ನು 150 ವರ್ಷಗಳ ಹಿಂದೆಯೇ ಚೆನ್ನಬಸಪ್ಪನವರು ಮಾಡಿದ್ದರು. ನಿಜವಾದ ಕನ್ನಡದ ಶಕ್ತಿ ಕೇಂದ್ರ ಎಂದರೆ ಶಿಕ್ಷಕರ ತರಬೇತಿ ಕೇಂದ್ರ(ಡೈಟ್) ಆಗಿತ್ತು. ಕನ್ನಡ ಪರಂಪರೆ ಬೆಳೆಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿದರು.
ಸಂಘದ ಹಿರಿಯ ಆಜೀವ ಸದಸ್ಯರಾದ ಧಾರವಾಡದ ಶ್ರೀಮತಿ ಕಸ್ತೂರಿ ಜಿಗಜಿನ್ನಿ, ಹುಬ್ಬಳ್ಳಿಯ ಶಶಿಧರ ಮಠದ, ಧಾರವಾಡದ ಡಾ. ಶಿವಯೋಗಿ ಟೆಂಗಿನಕಾಯಿ ಅವರನ್ನು ಗೌರವಿಸಲಾಯಿತು. ಧಾರವಾಡ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ಸದಸ್ಯೆ ಶ್ರೀಮತಿ ಭಾರತಿದೇವಿ ರಾಜಗುರು ಹಿರಿಯ ಆಜೀವ ಸದಸ್ಯರನ್ನು ಗೌರವಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಶ್ರೀಮತಿ ಸವಿತಾ ಮಾಲತೇಶ ಕುಲಕರ್ಣಿ ಹಾಗೂ ತಂಡದವರಿಂದ ಸುಗಮ ಸಂಗೀತ ಜರುಗಿತು. ಕೊನೆಯಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀಮತಿ ಸವಿತಾ ಗಣೇಶ ತಂಡದಿಂದ ಉಧೋ ಉಧೋ ಯಲ್ಲವ್ವ ಏಕವ್ಯಕ್ತಿ ಪ್ರದರ್ಶನ ಸೊಗಸಾಗಿ ಮೂಡಿ ಬಂದಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿನದತ್ತ ಹಡಗಲಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಶಂಕರ ಹಲಗತ್ತಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಜಿ.ಬಿ. ಹೊಂಬಳ, ಸಿ.ಯು. ಬೆಳ್ಳಕ್ಕಿ, ಶಿವಣ್ಣ ಬೆಲ್ಲದ, ಡಾ. ಎಚ್.ಎ. ಪಾಶ್ರ್ವನಾಥ, ಎಂ.ಎಂ. ಚಿಕ್ಕಮಠ, ರಾಮಚಂದ್ರ ಧೋಂಗಡೆ, ಶ್ರೀನಿವಾಸ ವಾಡಪ್ಪಿ, ಅಶೋಕ ಚಿನಗುಡಿ, ಹೇಮಾ ಪಟ್ಟಣಶೆಟ್ಟಿ, ಶಾರದಾ ಕೌದಿ, ಸುಜಾತಾ ಹಡಗಲಿ, ಮಧುಮತಿ ಸಣಕಲ್, ಶಶಿಧರ ಉಜ್ಜಿನಿ, ಲಿಂಬಣ್ಣದೇವರಮಠ ದಂಪತಿಗಳು, ಚನಬಸಪ್ಪ ಅವರಾಧಿ, ಸದಾಶಿವ ಜನಗೌಡರ, ಪ್ರಕಾಶ ಮುಳಗುಂದ, ಶಂಕರಲಿಂಗ ಶಿವಳ್ಳಿ, ಎಸ್.ಕೆ. ಕುಂದರಗಿ, ರೇಖಾ ಅಂತಕ್ಕನವರ, ವಿಷಯಾ ಜೇವೂರ, ನಂದಾ ಗುಳೇದಗುಡ್ಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.