ಹಿರಿಯ ಕಲಾವಿದ ರಮೇಶ್ ಪಂಡಿತ್  ಹೊಸ ಸಾಹಸ

ಹಿರಿಯ ಕಲಾವಿದ ರಮೇಶ್ ಪಂಡಿತ್ ನಾಯಕನಾಗಿ ಕಾಣಿಸಿಕೊಂಡಿರುವ “ಭಾವಪೂರ್ಣ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚೇತನ್ ಮುಂಡಾಡಿ ನಿರ್ದೇಶನದ, ಪ್ರಶಾಂತ್ ಅಂಜನಪ್ಪ ನಿರ್ಮಾಣವಿದೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಈ ವೇಳೆ ಮಾತಿಗಿಳಿದ ನಟ ರಮೇಶ್ ಪಂಡಿತ್, ನಾಯಕ ಎಂದು ಹೇಳಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ನಾಯಕ ಎನ್ನುವುದು ಜವಾಬ್ದಾರಿ ಕೆಲಸ. ಚಿತ್ರದಲ್ಲಿ ಕಥೆಯೇ ನಾಯಕ‌.‌ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು. ಹಿರಿಯ ಕಲಾವಿದೆ ಶೈಲಶ್ರೀ ಧರ್ಮೇಂದ್ರ ಅರಸ್,  ಬಾಯಿ ಬಡಕಿ ಪಾತ್ರ, ರಮೇಶ್ ಪಂಡಿತ್ ಹೆಂಡತಿ ಪಾತ್ರ ಎಂದರು.

ನಿರ್ದೇಶಕ ಚೇತನ್ ಮುಂಡಾಡಿ, ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ ತೀರ ಯಾನ.  ಸಾವಿನಾಚೆಗೂ ತಾನು  ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟುಹೋಗುವ  ಪ್ರಯತ್ನ . ಇನ್ನೊಬ್ಬ ಯುವಕ.  ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್ ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ  ಪ್ರೀತಿಯ ಪಯಣ.  ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು.ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ ಎನ್ನುವುದೇ  ” ಭಾವಪೂರ್ಣ ” ಎದೆ ಬಡಿತದ ಕಥಾವಸ್ತುವಾಗಿ ಕಾಡುವುದು ಎಂದರು.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಸುಂದರ್ ವೀಣಾ, ನಿರ್ಮಾಪಕ ಪ್ರಶಾಂತ್ ಆಂಜನಪ್ಪ , ಅಥರ್ವ ಪ್ರಕಾಶ್, ಛಾಯಾಗ್ರಾಹಕ ಪ್ರಸನ್ನ, ಹಿನ್ನೆಲೆ ಸಂಗೀತ ನೀಡುರುವ ಅಕ್ಷಯ್ ಹಾಗೂ ಸಂಕಲನಕಾರ ಕೀರ್ತಿರಾಜ್ . ಡಿ. “ಭಾವಪೂರ್ಣ” ದ ಬಗ್ಗೆ ಮಾತನಾಡಿದರು.