ಹಿರಿಯ ಉದ್ಯಮಿಗಳಿಗೆ ಸನ್ಮಾನ ಕಾರ್ಯಕ್ರಮ

ಸುಳ್ಯ, ಏ.೧- ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ವಾರ್ಷಿಕ ಮಹಾಸಭೆ ಮತ್ತು ಹಿರಿಯ ಉದ್ಯಮಿಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಸುಳ್ಯ ದ್ವಾರಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಉದ್ಯಮಿಗಳಾದ ಅಡ್ಕಾರ್ ಶ್ರೀ ಗಣೇಶ್ ಕ್ಯಾಶೂಸ್ ಮಾಲಕ ಉಪೇಂದ್ರ ಕಾಮತ್,ಸುಳ್ಯ ಗಣೇಶ್ ಇಲೆಕ್ಟ್ರಿಕಲ್ಸ್ ಮಾಲಕ ಗಣೇಶ್ ಶರ್ಮ, ಸೀಪುಡ್ ಮಾಲಕ ಹಾಜಿ ಇಬ್ರಾಹಿಂ ಇವರನ್ನು ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತು ವರ್ತಕರ ಸಂಘದ ಪದಾಧಿಕಾರಿಗಳು ಸೇರಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಡಿ.ಎಸ್ ಗಿರೀಶ್ ವಾಚಿಸಿದರು. ಲೆಕ್ಕ ಪತ್ರ ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಪಿ.ಆರ್.ಚಂದ್ರಶೇಖರ್, ಪ್ರಭಾಕರನ್ ನಾಯರ್ ಸ್ವಾಗತ್,ಆದಂ ಹಾಜಿ ಕಮ್ಮಾಡಿ, ಸಿಎ ಗಣೇಶ್ ಭಟ್ ಪಿ,ರಾಮಚಂದ್ರ .ಪಿ, ಜೊತೆ ಕಾರ್ಯದರ್ಶಿಗಳಾದ ಟಿ.ಎಂ.ಖಾಲೀದ್,ಜಗನ್ನಾಥ ರೈ, ನಿರ್ದೇಶಕರಾದ ಹಾಜಿ ಅಬ್ದುಲ್ ಹಮೀದ್ ಜನತಾ, ಸುಂದರ್ ರಾವ್.ಎಂ, ಜಯಂತ್ ಶೆಟ್ಟಿ.ಕೆ, ಪಿ.ಎ ಮಹಮ್ಮದ್, ಧರ್ಮಪಾಲ ಕುರುಂಜಿ, ಶಶಿಧರ ಶೆಟ್ಟಿ, ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ, ಗುರುವಿಕ್ರಮ್ ಪ್ರಸಾದ್, ಎಸ್.ಅಬ್ದುಲ್ಲಾ ಕಟ್ಟೆಕ್ಕಾರ್, ಹೇಮಂತ್ ಕಾಮತ್, ದೇವರಾಮ್ ಶಿರ್ವಿ ಉಪಸ್ಥಿತರಿದ್ದರು.