ಹಿರಿಯೂರು : ಹೊಸ ಅಂಬುಲೇನ್ಸ್ ಲೋಕಾರ್ಪಣೆ

 ಹಿರಿಯೂರು.ಏ.23: ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ನೂತನ ಅಂಬುಲೆನ್ಸ್ ಲೋಕಾರ್ಪಣೆ ಮಾಡಿದರು. ಕೊರೊನಾ ಅಲೆ ಎದ್ದಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಿದೆ ಇದರ ಸದುಪಯೋಗವಾಗಲಿ ಎಂದು ಹೇಳಿದರು. ಟಿ.ಹೆಚ್.ಓ ಡಾ. ವೆಂಕಟೇಶ್ ರವರು ಮಾತನಾಡಿ ಇಲ್ಲಿ ಅಂಬುಲೆನ್ಸ್ ನ ಅಗತ್ಯ ತುಂಬಾ ಇತ್ತು ಇದರಿಂದ ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಾಲಾಕ್ಷ, ನಗರಸಭೆ ಅಧ್ಯಕ್ಷೆ ಶುಂಷುನ್ನೀಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಪೌರಾಯುಕ್ತರಾದ ಟಿ.ಲೀಲಾವತಿ, ನಗರಸಭೆ ಸದಸ್ಯ ಮಹೇಶ್‌ಪಲ್ಲವ, ಎಂ.ಡಿ. ಸಣ್ಣಪ್ಪ, ಬಾಲಕೃಷ್ಣ, ಸರವಣ, ದಾದಾಪೀರ್, ಬಿ.ಎನ್.ತಿಪ್ಪೇಸ್ವಾಮಿ, ಡಾ.ರಂಗನಾಥ್, ಎ.ಎಂ.ಓ ಡಾ.ಪ್ರಭು, ಅಸ್ಗರ್ ಅಹಮದ್, ಶ್ರೀನಿವಾಸ್, ಹರೀಶ್, ರಘು ಹಾಗೂ ಅನೇಕ ಯುವ ಮುಖಂಡರು ಉಪಸ್ಥಿತರಿದ್ದರು.