ಹಿರಿಯೂರು ಶಾಸಕರಿಂದ  ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ 

ಹಿರಿಯೂರು. ಜ. 13–ಹಿರಿಯೂರು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಸಂಜೆವಾಣಿ ದಿನಪತ್ರಿಕೆಯ 2023 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಸುದ್ದಿ ಇಂದೇ ಓದುವ ಧ್ಯೇಯದೊಂದಿಗೆ ಸಂಜೆವಾಣಿ ದಿನಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು ಹಾಗೂ  ಪತ್ರಿಕೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್, ಪೌರಾಯುಕ್ತರಾದ ಡಿ ಉಮೇಶ್, ಬಿ.ಇ. ಓ ನಾಗಭೂಷಣ್, ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ, ಟಿ.ಹೆಚ್.ಓ.ಡಾ. ವೆಂಕಟೇಶ್, ವೃತ್ತ  ನಿರೀಕ್ಷಕರಾದ ಆನಂದ್, ಕೆ ಆರ್ ರಾಘವೇಂದ್ರ, ಪತ್ರಕರ್ತರಾದ ಎಂ ರವೀಂದ್ರನಾಥ್, ಕಿರಣ್ ಮಿರಜ್ಕರ್ ಮತ್ತಿತರರು  ಉಪಸ್ಥಿತರಿದ್ದರು.