ಹಿರಿಯೂರು : ವೈದ್ಯರ ದಿನಾಚರಣೆ

ಸಂಜೆವಾಣಿ ವಾರ್ತೆ

 ಹಿರಿಯೂರು ಜುಲೈ .2- ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯೂರಿನ ಸಾಹಿತಿ ಎಂ ಕಿರಣ್ ಮಿರಜ್ಕರ್  ಹಾಗೂ ಎಂ.ರವೀಂದ್ರನಾಥ್ ರವರು ನಗರದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರಿಗೆ ಶುಭ ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ರವರು ವೈದ್ಯರ ಸೇವೆ ತುಂಬಾ ಅಮೂಲ್ಯವಾದದ್ದು. ಇಂದು ವೈದ್ಯರ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ನಿವೃತ್ತ ಡಿ ಹೆಚ್ ಓ ಡಾಎಸ್.ಆರ್. ಮಹಾಲಿಂಗಪ್ಪ, ವೈದ್ಯರಾದ ಡಾ. ಟಿ.ವೆಂಕಟೇಶ್, ಡಾ.ರಘು, ಡಾ. ರಿಯಾಜ್ ಬೇಗ್, ಡಾ. ರವಿ ನಾಯಕ್, ಡಾ.ಚಂಪಾ, ಡಾ.ನಾಗರಾಜ್, ಡಾ. ನಾಗೇಶ್ ಮತ್ತಿತರ ವೈದ್ಯರಿಗೆ ಭೇಟಿ ಮಾಡಿ ವೈದ್ಯರ ದಿನಾಚರಣೆಯ ಶುಭ ಕೋರಿದರು.