ಹಿರಿಯೂರು ; ವಾಲ್ಮೀಕಿ ಜಯಂತಿ ಕಾರ್ಯಕ್ರಮ


ಹಿರಿಯೂರು.ಅ.22: ಹಿರಿಯೂರಿನ ಯರಗುಂಟೇಶ್ವರ ಬಡಾವಣೆಯಲ್ಲಿ  ವಾಲ್ಮೀಕಿ ಜಯಂತಿಯನ್ನು  ಹಿರಿಯೂರು ತಾಲ್ಲೂಕು ವಾಲ್ಮೀಕಿ ಸಮಾಜದ ಯುವ ಬಂಧುಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಕಾರ್ಯದರ್ಶಿಗಳು ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಹರ್ತಿಕೋಟೆ ವೀರೇಂದ್ರ ಸಿಂಹ   ಮಾತಾನಾಡಿ ವಾಲ್ಮೀಕಿ ಮಹಾರ್ಷಿಗಳಿಂದ ಇಂದು ರಾಮಾಯಣ ರಚಿತವಾಗಿದೆ ರಾಮಾಯಣದ ಮರ್ಯೂದ ಪುರೋಷತ್ತಮ ಶ್ರೀರಾಮˌಲಕ್ಷಣಾˌ ಸೀತೆ ಹನುಮಂತˌ ರಾವಣ ರ ಬಗ್ಗೆ ಆಗಾಧ ಬೆಳಕು ಚೆಲ್ಲಿದೆ ರಾಮನ ಜೀವನ ಸರ್ವರಿಗೂ ಸರ್ವಧರ್ಮಗಳಿಗೆ ಪ್ರೇರಣೆ ಸ್ಫೂರ್ತಿ ಸತ್ಕಾರ್ಯಗಳ ಮಹಾನ್ ಪ್ರೇರಣಾ ಶಕ್ತಿಯಾಗಿದೆ ಎಂದರು ಶ್ರೀ ಮಹಾನ್ ವಾಲ್ಮೀಕಿ ಗುರುಗಳ ಜೀವನ ಸಾಧನೆ ಅವರ ಆದರ್ಶಗಳು ಮಾರ್ಗದರ್ಶನಗಳು ಸದಾ ಕಾಲಕ್ಕೂ ಸರ್ವ ಕಾಲಕ್ಕೂ ಚಿರಸ್ಮರಣಿಯ ಎಂದರು. ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಹೆಚ್ ಕೆ ಚಂದ್ರಶೇಖರ್  ಮಾತಾನಾಡಿ ಜನಾಂಗದ ಪ್ರತಿಯೊಬ್ಬರೂ ಪಕ್ಷಭೇಧ ಮರೆತು ಜನಾಂಗದ ಹಿತದೃಷ್ಟಿಗೆ   ಸದಾ ಕಂಕಣ ಬದ್ಧರಾಗಿರಬೇಕು  ಎಂದರು ನಾಯಕ ವಾಲ್ಮೀಕಿ ಸಮಾಜಕ್ಕೆ 7,5 ಮೀಸಲಾತಿಗಾಗಿ ಸಮಾಜದ ಪ್ರತಿಯೊಬ್ಬರೂ ಪಕ್ಷಭೇದ ಮರೆತು ಒಂದಾಗಬೇಕು ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದ ಎಲ್ಲಾ ಯುವಕರು ಸಂಘಟನೆಗೆ ಮುಂದಾಗಬೇಕು ಜನಾಂಗದ ಅಭಿವೃಧ್ಧಿಗೆ ಶ್ರಮಸಬೇಕು ಎಂದು ಕರೆಕೊಟ್ಟರು ಈ ಸಂಧರ್ಭದಲ್ಲಿ ಸಮಾಜದ ಹಿರಿಯರಾದ ಸಿದ್ಧಪ್ಪ ವಾಲ್ಮೀಕಿ ಸಮಾಜದ ಶ್ರೀಧರ್ˌ ಯಶು ಕಿಚ್ಚಾˌ ಅಜೇಯ್ˌಸತೀಶ್. ಪ್ರಜ್ವಾಲ್.ಶಶಿ ಹಾಗೂ ಸಮಾಜದ ಅನೇಕ ಯುವಮುಖಂಡರು ಪಾಲ್ಗೊಂಡಿದ್ದರು .