ಹಿರಿಯೂರು ಏ.14- ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಿರಿಯೂರಿನಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗುರುವಾರ ಸಂಜೆ ಆಯೋಜಿಸಲಾಗಿತ್ತು. ನಗರದ ಬಿಇಓ ಕಚೇರಿ ವೃತ್ತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿ ಪಂಜುಗಳು ಮತ್ತು ಮೇಣದಬತ್ತಿಗಳನ್ನು ಹಚ್ಚಿ ಹಿಡಿದು ಮತದಾನದ ಜಾಗೃತಿ ಬಗ್ಗೆ ವಾಗ್ದಾನ ಮಾಡಿದರು. ನಮ್ಮ ನಡೆ ಮತದಾನದ ಕಡೆ, ಕಡ್ಡಾಯವಾಗಿ ಮತದಾನ ಮಾಡಿ ಎಂಬ ನಾಮಫಲಕಗಳನ್ನು ಹಿಡಿದಿದ್ದರು. ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಹಾಗೂ ಸಿಬ್ಬಂದಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಶಿವಪ್ರಕಾಶ್ ಹಾಗೂ ಸಿಬ್ಬಂದಿ ವರ್ಗದವರು.ಪೌರಯುಕ್ತರಾದ ಬಿ.ಸಿ ಬಸವರಾಜ್, ಕಂದಾಯ ಅಧಿಕಾರಿ ಜಯಣ್ಣ ಹಾಗೂ ಸಿಬ್ಬಂದಿ ವರ್ಗದವರು ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿಯಾದವ್ ಸದಸ್ಯರಾದ ಅಂಬಿಕಾ, ಸಮಾಜ ಸೇವಕರಾದ ಶಶಿಕಲಾ ರವಿಶಂಕರ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಬಿಇಓ ನಾಗಭೂಷಣ್, ತಾಲೂಕು ವೈದ್ಯಾಧಿಕಾರಿ ಡಾ. ಟಿ ವೆಂಕಟೇಶ್ ಹಿರಿಯ ಪತ್ರಕರ್ತರಾದ ಎಂ ರವೀಂದ್ರನಾಥ್, ಕಿರಣ್ ಮಿರಜ್ಕರ್ , ಪ್ರಶಾಂತ ನಾಯಕ,ಜಿ.ಎಲ್.ಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.