ಹಿರಿಯೂರು ಪೌರಾಯುಕ್ತರಿಗೆ ಸನ್ಮಾನ


ಹಿರಿಯೂರು.ನ.೧೨: ಹಿರಿಯೂರು ನಗರಸಭೆ ಪೌರಾಯುಕ್ತರಾದ ಟಿ.ಲೀಲಾವತಿಯವರು ೨೭ ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ ಶುಭ ಸಂದರ್ಭದಲ್ಲಿ ಅವರಿಗೆ ನಗರಸಭೆ ಅಧ್ಯಕ್ಷರಾದ ಶಂಷುನ್ನೀಸಾ ರವರು ಮಾಲಾರ್ಪಣೆ ಮಾಡಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಪೌರಾಯುಕ್ತರಾದ ಲೀಲಾವತಿಯವರು ವಿವಿಧ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ ಹಿರಿಯೂರು ನಗರದ ಸ್ವಚ್ಛತೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಜಾಗೃತಿ ಮತ್ತಿತರೆ ಉತ್ತಮ ಕೆಲಸ ಕಾರ್ಯಗಳನ್ನು ನಡೆಸಿದ್ದಾರೆ ಅವರು ಮುಂದೆಯೂ ಉತ್ತಮ ಸೇವೆ ಮಾಡಲಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲೀಲಾವತಿಯವರು ತಂದೆ ತಾಯಿ ಹಾಗೂ ಗುರುಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ನನ್ನ ೨೭ ವರ್ಷದ ಸಾರ್ಥಕ ಸೇವೆಗೆ ಕಾರಣವಾಗಿದೆ ಎಂದು ಹೇಳಿದರು. ನಗರಸಭೆ ವ್ಯವಸ್ತಾಪಕರಾದ ರೆಹಮತ್ ಉನ್ನೀಸಾ ಹಾಗೂ ಸಿಬ್ಬಂದಿವರ್ಗದವರು ಸದಸ್ಯರು ಉಪಸ್ಥಿತರಿದ್ದರು.