ಹಿರಿಯೂರು ನೂತನ ತಹಶೀಲ್ದಾರ್ ರಾಜೇಶ್ ಕುಮಾರ್ ಅಧಿಕಾರ ಸ್ವೀಕಾರ 

ಸಂಜೆವಾಣಿ ವಾರ್ತೆ

ಹಿರಿಯೂರು :  ಆ.1-ಹಿರಿಯೂರು ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳಾಗಿ ಸಿ ರಾಜೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.  ನಗರದ ದಕ್ಷಿಣ ಕಾಶಿ, ಶ್ರೀ ತೇರುಮಲೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನ ತಹಶೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಆತ್ಮೀಯವಾಗಿ ಸ್ವಾಗತಿ ಸಿದರು.