ಹಿರಿಯೂರು; ಗುರು ವಂದನೆ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

 ಹಿರಿಯೂರು.ಜು. 26-ಹಿರಿಯೂರಿನ 1982 ವಿದ್ಯಾರ್ಥಿಗಳ ಸಂಘದ ವತಿಯಿಂದ ಮೋಹನ್ ಫಾರಂ ಹೌಸ್ ನಲ್ಲಿ ಗುರು ವಂದನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಗುರುಗಳಾದ ಹೆಚ್ ಎಂ ಬಸವರಾಜ್,ಎಲ್ ಎಂ ಶ್ರೀಕಂಠಯ್ಯ, ಎಸ್ ಕೃಷ್ಣಮೂರ್ತಿ,ಟಿ. ಕೆ ಚಂದ್ರಶೇಖರ್ ಇವರು ಭಾಗವಹಿಸಿ ಆಗಿನ ವಿದ್ಯಾರ್ಥಿಗಳು ಇಂದು ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಸ್ಗರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು, ಜಾಕೀರ್ ಹುಸೇನ್ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು, ದಯಾನಂದ್ ರವರು ಸ್ವಾಗತ ಭಾಷಣ ಮಾಡಿದರು. ಸಹಪಾಠಿಗಳಾದ  ವಿ ತಿಪ್ಪೇಸ್ವಾಮಿ, ಡಾ. ಮೋಹನ್ ಕುಮಾರ್, ಶಿವಶಂಕರ್, ಎಂ.ಪಿ ಕಲ್ಯಾಣ ಕುಮಾರ್ ಉಮಾ ಮಹೇಶ್ ಮತ್ತಿತರರು ಮಾತನಾಡಿದರು. 1982 ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.