ಹಿರಿಯೂರು ಇನ್ನರ್ವೀಲ್ ಪದಗ್ರಹಣ ಸಮಾರಂಭ 

ಸಂಜೆವಾಣಿ ವಾರ್ತೆ

ಹಿರಿಯೂರು ಜುಲೈ.4-ಹಿರಿಯೂರಿನ ನೂತನ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು. ನಗರದ ರೋಟರಿ ಸಭಾಭವನದಲ್ಲಿ  ಚಿತ್ರದುರ್ಗದ ಜ್ಯೋತಿ ಲಕ್ಷ್ಮಣ್ ನೆರವೇರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಲಕ್ಷ್ಮಿ ರಾಜೇಶ್ ಕಾರ್ಯದರ್ಶಿಯಾಗಿ ಭವಾನಿ ಶ್ರೀನಿವಾಸ್ ಹಾಗೂ ಖಜಾಂಚಿಯಾಗಿ ಸುಚಿತ್ರಾ ಅಮರನಾಥ್ ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ  ಜ್ಯೋತಿ ಲಕ್ಷ್ಮಣ್ ರವರು ಇನ್ನರ್ ವೀಲ್  ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇನ್ನೂ ಸಾಕಷ್ಟು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಹಿಂದಿನ ಅಧ್ಯಕ್ಷರಾದ ಸರ್ವ ಮಂಗಳ ರಮೇಶ್ ಮತ್ತು ಪದಾಧಿಕಾರಿಗಳು ರೊಟೇರಿಯನ್ ದೇವರಾಜ ಮೂರ್ತಿ ಜೋಗಪ್ಪ ಹಾಗೂ ಇನ್ನರ್ ವೀಲ್ ಸದಸ್ಯರು ಹಾಗೂ ರೋಟೆರಿ ಕ್ಲಬ್ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.