ಹಿರಿಯೂರು; ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹಿರಿಯೂರು: ಜು.೩೦; -ನಗರದ 19ನೇ ವಾರ್ಡ್ ನಲ್ಲಿ ನಗರಸಭೆ ಸದಸ್ಯರಾದ ವೈಪಿಡಿ ದಾದಾಪೀರ್ ಇವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ದಾದಾಪೀರ್ ರವರು ಇಲ್ಲಿ ಕಳೆದ 36 ವರ್ಷಗಳ ಹಿಂದೆ ಟಾರ್ ರಸ್ತೆ ಮಾಡಲಾಗಿತ್ತು, ಪ್ರಸ್ತುತ ಈ ರಸ್ತೆ ಕಿತ್ತು ಹೋಗಿದ್ದು ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಬೇಡಿಕೆಯಾಗಿತ್ತು.ಇದೀಗ ಇಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಮಾಡಿಸಲಾಗಿದೆ ಮತ್ತು ನೂತನ ಚರಂಡಿ ಕಾಮಗಾರಿಯನ್ನು ನಿರ್ಮಿಸಲಾಗಿದೆ ಅಲ್ಲದೆ ಬಾಲಕೃಷ್ಣ ಸ್ವಾಮಿ ದೇವಾಲಯದ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು. ವಾರ್ಡ್ ನ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ ವಾರ್ಡಿನಲ್ಲಿ ಯಾವುದೇ ಮೂಲಭೂತ ಸಮಸ್ಯೆ ಇದ್ದರೂ ಸಾರ್ವಜನಿಕರು ನನಗೆ ಸಂಪರ್ಕಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಾರ್ಡ್ ನ  ಸಾರ್ವಜನಿಕರು ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.