
ಸಂಜೆವಾಣಿ ವಾರ್ತೆ
ಹಿರಿಯೂರು : ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಇಂದು ಜೋಕುಮಾರಸ್ವಾಮಿಯನ್ನು ಮೆರವಣಿಗೆ ಮಾಡಿದರು ಜೋಕುಮಾರ ಸ್ವಾಮಿಯ ಪೂಜೆ ನಡೆಸಿಕೊಂಡು ಬಂದ ಯಶೋದಮ್ಮ ರತ್ನಮ್ಮ ವಿನೋದಮ್ಮ ಮತ್ತು ರೇಣುಕಮ್ಮ ಇವರು ಸ್ವಾಮಿಯನ್ನು ಪುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಸೊಪ್ಪು ಹೂವು ಗಳಿಂದ ಸಿಂಗರಿಸಿ ಗಲ್ಲಿ ಗಲ್ಲಿಗಳ ಮನೆಗಳಿಗೆ ಭೇಟಿ ನೀಡಿ ಮನೆಗಳಲ್ಲಿ ಭಕ್ತರು ನೀಡುವ ಅಕ್ಕಿ ಬೇಳೆ ಬೆಲ್ಲ ಕಾಯಿ ಹೂವು ಹಣ್ಣು ದಕ್ಷಿಣೆ ಸಂಗ್ರಹಿಸಿದರು ಭಕ್ತರ ಮನೆಗಳಲ್ಲಿ ಸ್ವಾಮಿಗೆ ತಮ್ಮ ತಮ್ಮ ಇಷ್ಟಾನುಸಾರ ಕಾಣಿಕೆ ನೀಡಿದರು