ಹಿರಿಯೂರಿನಿಂದ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ


 ಹಿರಿಯೂರು.ಮೇ 14- ಹಿರಿಯೂರಿನಿಂದ ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ ಎಂದು ಪ್ರವರ್ಗ 1 ರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಿ.ಟಿ ಶ್ರೀನಿವಾಸ್ ಹೇಳಿದರು. ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ 7ನೇ ಫೆಡರೇಶನ್ ಕಪ್ ಪುರುಷ ಮತ್ತು ಮಹಿಳೆಯರ ದೀಪಾಲಂಕೃತ  ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯೂರಿನ ತಾಲೂಕು ಕ್ರೀಡಾಂಗಣ ಹಾಗೂ ನೆಹರು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಕೆ ಪರಶುರಾಮ್ ಮಾತನಾಡಿ ಹಿರಿಯೂರಿನಲ್ಲಿ ದೇಶದ ನಾನಾ ಭಾಗಗಳಿಂದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸ್ಪರ್ಧಿಸಲು ಕ್ರೀಡಾಪಟುಗಳು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಹಾಗೂ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಡಿವೈಎಸ್ಪಿ ರೋಶನ್ ಜಮೀರ್, ನಗರಸಭೆ ಅಧ್ಯಕ್ಷರಾದ ಶಂಶುನ್ನೀಸ, ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಎಮ್ ಶಕೀಲ್ ನವಾಜ್, ಕಿರ್ಲೋಸ್ಕರ್ ಕಂಪನಿಯ ಎಂ ಡಿ ಗುಮಾಸ್ತೆ, ವಾಗ್ದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ ವಿ. ಅಮರೇಶ್, ತ್ರಿಯಂಬಕಮೂರ್ತಿ, ಎಂ ಡಿ ಸಣ್ಣಪ್ಪ, ಬಾಲಕೃಷ್ಣ, ಪಿ ಎಂ ಸಾಧಿಕ್ ಉಲ್ಲಾ, ಡಿ ಜಿ ಶ್ರೀನಿವಾಸ್, ಶಿವಶಂಕರ ಮಠದ್, ಎಂ ಪಿ ತಿಪ್ಪೇಸ್ವಾಮಿ, ಯೋಗಾನಂದ್, ಆಸ್ಗರ್ ಅಹಮದ್,  ಕೊಟ್ರೇಶ್, ಜಫ್ರುದ್ದೀನ್, ಎ. ರಾಘವೇಂದ್ರ, ಮಾರುತಿರಾವ್ ಶೇಷಾದ್ರಿ ಸೇರಿದಂತೆ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಪದಾಧಿಕಾರಿಗಳು  ನಾನಾ ಭಾಗಗಳಿಂದ ಆಗಮಿಸಿದ್ದ ಬಾಲ್ ಬ್ಯಾಡ್ಮಿಂಟನ್ ಮಾರ್ಗದರ್ಶಕರು ಭಾಗವಹಿಸಿದ್ದರು. ಚಿನ್ನದ ಪದಕ ಪುರಸ್ಕೃತರಾದ ಎಂ ಆರ್ ಅಮೃತಲಕ್ಷ್ಮಿಯವರು ಕಾರ್ಯಕ್ರಮ ನಿರೂಪಿಸಿದರು, ಶಿವಶಂಕರ್ ಮಠದ್ ಸ್ವಾಗತಿಸಿದರು, ಎ. ರಾಘವೇಂದ್ರ ವಂದಿಸಿದರು.