ಹಿರಿಯೂರಿನಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

 ಹಿರಿಯೂರು : ಏ.12- ನಗರದಲ್ಲಿ ಸಮಸ್ತ ಮುಸ್ಲಿಮ್ ಬಾಂಧವರು ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಿದರು. ಇಲ್ಲಿಯ ಜಾಮಿಯಾ ಮಸೀದಿ ಬಳಿ ಬಂದ ಸಮಸ್ತ ಮುಸ್ಲಿಂ ಬಾಂಧವರು ಅಲ್ಲಿಂದ ತೇರುಮಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ನೆಹರು ವೃತ್ತ ಗಾಂಧಿ ವೃತ್ತ ದ ಮೂಲಕ ತಾಲೂಕು ಕಚೇರಿ ಬಳಿ ಇರುವ ಪ್ರಾರ್ಥನಾ ಸ್ಥಳಕ್ಕೆ ಬಂದು ಸೇರಿದರು.  ಅಲ್ಲಾಹೋ  ಅಕ್ಬರ್ ಅಲ್ಲಾಹೋ ಅಕ್ಬರ್ ಎಂದು ಹೇಳುತ್ತಾ ಸಾಗರೋಪಾದಿಯಲ್ಲಿ ಬಂದ ಮುಸ್ಲಿಂ ಬಾಂಧವರು ಸುಖ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿದರು