
ಹಿರಿಯೂರು ಏ. 22 : ಹಿರಿಯೂರಿನಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಿದರು. ತಂಡೋಪ ತಂಡವಾಗಿ ಬಂದು ನಗರದ ಜಾಮಿಯ ಮಸೀದಿ ಬಳಿ ಸೇರಿದ ಮುಸ್ಲಿಂ ಬಾಂಧವರು ಅಲ್ಲಿಂದ ತೇರು ಮಲ್ಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ನೆಹರು ವೃತ್ತ ಗಾಂಧಿ ವೃತ್ತ ಪ್ರಧಾನ ರಸ್ತೆಯ ಮೂಲಕ ಅಲ್ಲಾಹು ಅಕ್ಬರ್ ಎಂದು ಪ್ರಾರ್ಥಿಸುತ್ತಾ ಸಾಗರೋಪಾದಿಯಲ್ಲಿ ತಾಲೂಕು ಕಚೇರಿ ಬಳಿ ಇರುವ ಪ್ರಾರ್ಥನಾ ಸ್ಥಳಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.