ಹಿರಿಯೂರಿನಲ್ಲಿ ಸಂಭ್ರಮದ  ಮಹಿಳಾ ದಿನಾಚರಣೆ 

ಹಿರಿಯೂರು ಮಾ. 12-ಹಿರಿಯೂರಿನಲ್ಲಿ  ಸಮೃದ್ಧಿ ಮಹಿಳಾ ಸಂಘದ ವತಿಯಿಂದ ಸಡಗರ ಸಂಭ್ರಮದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಇಂದು ಮಹಿಳೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿರುವುದು ತುಂಬಾ ಮೆಚ್ಚುಗೆ ಪಡುವಂತಹ ವಿಚಾರವಾಗಿದೆ, ಮಹಿಳೆಯರು ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ನಿರ್ಭೀತಿಯಿಂದ ಪಾಲ್ಗೊಳ್ಳಬೇಕು ಮತ್ತು ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ತುಂಬಾ ಇದೆ ಎಂದು ಮಾತನಾಡಿದರು. ನಂತರ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.