ಹಿರಿಯೂರಿನಲ್ಲಿ ವೈಭವದ ರಾಮೋತ್ಸವ 

ಹಿರಿಯೂರು.- ನಗರದ ಪ್ರಧಾನ ರಸ್ತೆಯಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಪೂಜಾ ಸಮಿತಿ ವತಿಯಿಂದ ರಾಮನವಮಿ ಪೂಜಾ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಇದರ ಅಂಗವಾಗಿ ಪಟ್ಟಾಭಿರಾಮದೇವರಿಗೆ  ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ನಂತರ  ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮ ದೇವರ ವೈಭವದ ಮೆರವಣಿಗೆ ನಡೆಯಿತು. ಎಂ. ಎಸ್ ವೆಂಕಟೇಶ್, ಎಂ.ಎಸ್. ರಾಘವೇಂದ್ರ, ವೆಂಕಟೇಶ್ ದೀಕ್ಷಿತ್, ಪ್ರಭಾಕರ್, ಕುಮಾರ್, ಸಂದೇಶ್ ಸೇರಿದಂತೆ ಅನೇಕ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.