ಹಿರಿಯೂರಿನಲ್ಲಿ ವಕೀಲರಿಂದ ಪ್ರತಿಭಟನೆ

 ಹಿರಿಯೂರು ಜು.30 -ಹೊಸ ಕಾಯಿದೆಯ ಅನ್ವಯ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಿಂದ ಪಡೆಯಬೇಕಾಗಿದೆ, ಆದುದರಿಂದ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಅಲೆದಾಡಬೇಕಾಗುತ್ತದೆ ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ, ಇದನ್ನು ತಪ್ಪಿಸಿ ಈ ಹಿಂದೆ ಇದ್ದ ಹಾಗೆ ಮುಂದುವರಿಸಬೇಕು ಎಂದು ಹಿರಿಯೂರಿನಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎನ್.ವಿ. ಅನೀಲ್ ಕುಮಾರ್ ಕಾರ್ಯದರ್ಶಿ ಎಂ ಆರ್ ರಂಗಸ್ವಾಮಿ ಹಾಗೂ ಅನೇಕ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.