ಹಿರಿಯೂರಿನಲ್ಲಿ ಲಸಿಕೆಗೆ ಪರದಾಟ

ಹಿರಿಯೂರು.ಜೂ.4 ;ಪ್ರಸ್ತುತ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಿ ಎಂದು ಸಾಕಷ್ಟು ಪ್ರಚಾರ ನಡೆಯುತ್ತಿದೆ ಆದರೆ ಹಿರಿಯೂರಿನ ಲ್ಲಿ ಆಸ್ಪತ್ರೆ ಗೆ ಅಲೆದಾಡಿ ಸಾಕಾಗಿದ್ದು ಇವತ್ತು ಇಲ್ಲ ನಾಳೆ ನೋಡೋಣ ಬಂದಾಗ ಹಾಕ್ತೀವಿ ಅಂತಾರೆ, ಆದರೆ ಅವರಿಗೆ ಬೇಕಾದವರಿಗೆ ಮಾತ್ರ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಏತಕೆ ಈ ತಾರಾತಮ್ಯ ಎಂಬುದು ಅರ್ಥವಾಗುತ್ತಿಲ್ಲ ಜನ ಆಸ್ಪತ್ರೆ ಗೆ ಹೋಗಲು ಆಟೊಗಳು ಸಿಗುವುದಿಲ್ಲ,ಬೈಕ್ ನಲ್ಲಿ ಬಂದರೆ ಬೈಕ್ ಸೀಸ್ ಮಾಡುತ್ತಾರೆ, ಕೋವಿಡ್ ಭಯದ ವಾತಾವರಣ ದಲ್ಲಿ ಆಸ್ಪತ್ರೆ ಗೆ ಅಲೆದಾಡಿ  ಸಾಕಾಗಿದೆ, ಲಸಿಕೇನೂ ಬೇಡ  ಏನೂ ಬೇಡ ಎಂದು ಎಷ್ಪೋ ಜನ ಸುಮ್ಮನಾಗಿದ್ದಾರೆ.  ಹಿರಿಯ ಅಧಿಕಾರಿ ವರ್ಗದವರು  ಹಾಗು ಶಾಸಕರು ಇತ್ತ ಗಮನ ಹರಿಸಿ ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಕರು ಒತ್ತಾಯಿಸಿದ್ದಾರೆ.