ಹಿರಿಯೂರಿನಲ್ಲಿ ಪೌರಕಾರ್ಮಿಕ ದಿನಾಚರಣೆ 

ಸಂಜೆವಾಣಿ ವಾರ್ತೆ

ಹಿರಿಯೂರು : ಸೆ.27- ಹಿರಿಯೂರು ನಗರಸಭೆ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ನಗರಸಭೆ ಕಚೇರಿಯಿಂದ ಬೈಕ್ ರಾಲಿ ಮೂಲಕ  ಡಾ.ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪೌರಾಯುಕ್ತರಾದ  ಹೆಚ್ .ಮಹಾಂತೇಶ್ ಹಾಗೂ ಪೌರ ನೌಕರರ ಸಂಘದ ಅಧ್ಯಕ್ಷರಾದ ಬಿ ದುರ್ಗೇಶ್ ರವರ ನೇತೃತ್ವದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ  ಬೈಕ್ ರ್ಯಾಲಿ ಮೂಲಕ ನಗರಸಭೆ ಕಚೇರಿಗೆ ಬಂದು ನೌಕರರು ವಾದ್ಯಗೋಷ್ಠಿಯೊಂದಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ತೆರಳಿ ಆಸ್ಪತ್ರೆ ವೃತ್ತದ ಬಳಿ ಇರುವ ಡಾ.ಬಿ.ಆರ್ ಅಂಬೇಡ್ಕರ್  ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮವನ್ನು  ಎ.ಕೃಷ್ಣಪ್ಪ ರೋಟರಿ ಸಭಾಭವನದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪೌರ ನೌಕರರ ಸಂಘದ ಅಧ್ಯಕ್ಷರಾದ ಬಿ ದುರ್ಗೇಶ್ ವಹಿಸಿದ್ದರು. ಪೌರಾಯುಕ್ತರಾದ  ಹೆಚ್. ಮಹಾಂತೇಶ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯರಾದ ಶಂಸುನ್ನೀಸ,  ಗೀತಾ ಗಂಗಾಧರ್, ಶಿವರಂಜನಿ ಯಾದವ್,ವಿಶಾಲಾಕ್ಷಮ್ಮ ಬಿ ಎನ್ ಪ್ರಕಾಶ್, ಸಮೀವುಲ್ಲಾ, ಅಂಬಿಕಾ ಬಾಯಿ, ಚಿತ್ರಾಜಿತ್ ಯಾದವ್,  ವಿಠಲ್ ಪಾಂಡುರಂಗ, ದೇವಿರಮ್ಮ ಕವಿತಾ, ಮೊದಲ ಮರಿಯ, ಸುರೇಖಾಮಣಿ ಭಾಗವಹಿಸಿದ್ದರು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಪೌರಕಾರ್ಮಿಕರು ನೀರು ಸರಬರಾಜು ಮತ್ತು ಇತರೆ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ ಯಶವಂತ್ ಪ್ರಾರ್ಥಿಸಿದರು  ಕೆ ರಮೇಶ್ ಸ್ವಾಗತಿಸಿದರು  ನಿರೂಪಣೆಯನ್ನು ಶ್ರೀಮತಿ ಭಾನುಮತಿ ನಡೆಸಿದರು.