ಹಿರಿಯೂರಿನಲ್ಲಿ ನರಸಿಂಹ ಜಯಂತಿ ವಿಶೇಷ 

ಸಂಜೆವಾಣಿ ವಾರ್ತೆ

ಹಿರಿಯೂರು.ಮೇ.23  –  ನಗರದ ತೇರು ಬೀದಿಯಲ್ಲಿ ನೆಲೆಸಿರುವ ಶ್ರೀ ನರಸಿಂಹಸ್ವಾಮಿ ದೇವರಿಗೆ ನರಸಿಂಹ ಸ್ವಾಮಿ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಇದರ ಅಂಗವಾಗಿ ನರಸಿಂಹ ಸ್ವಾಮಿ ದೇವರಿಗೆ ಅರ್ಚನೆ ಅಭಿಷೇಕ ಲೋಕ ಕಲ್ಯಾಣಕ್ಕಾಗಿ  ವಿಶೇಷ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು