ಹಿರಿಯೂರಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಹಿರಿಯೂರು: ಫೆ.24-ಹಿರಿಯೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 25 ರ ಶನಿವಾರ ನಗರದ ನೆಹರು ಮೈದಾನದಲ್ಲಿ ನಡೆಸಲೇರ್ಪಡಿಸಿದೆ ಎಂದು ಕ.ಸಾ.ಪ  ತಾಲೂಕು ಅಧ್ಯಕ್ಷರಾದ ಡಾ. ವಿ ಎಂ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಾಹಿತಿಗಳು ಮತ್ತು ಪ್ರಾಧ್ಯಾಪಕರಾದ ಡಾ.ಜೆ ಕರಿಯಪ್ಪ ಮಾಳಿಗೆ ಸಮ್ಮೇಳನದ ಅಧ್ಯಕ್ಷರಾಗಿರುತ್ತಾರೆ. ಸಮ್ಮೇಳನವನ್ನು ಸಾಂಸ್ಕೃತಿಕ ಚಿಂತಕರು ಹಾಗೂ ಹಿರಿಯ ಸಾಹಿತಿಗಳಾದ ಡಾ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸುವರು, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ರಾಜ್ಯ ಪ್ರವರ್ಗ 1 ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಟಿ ಶ್ರೀನಿವಾಸ್ ಪುಸ್ತಕ ಬಿಡುಗಡೆ ಮಾಡುವರು. ಧ್ವಜಾರೋಹಣ ದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಮತ್ತು  ಪೊಲೀಸ್ ನಿರೀಕ್ಷಕರಾದ ಅಭಯ ಪ್ರಕಾಶ್ ಸೋಮನಾಳ  ಉದ್ಘಾಟಿಸಲಿದ್ದಾರೆ, ಸಾಹಿತ್ಯ ಶಿಕ್ಷಣ ಸಂಸ್ಕೃತಿ ಮಹಿಳಾ ಚಿಂತನೆ ಗೋಷ್ಠಿ, ಸಮ್ಮೇಳನ ಅಧ್ಯಕ್ಷರ ಒಡನಾಟದ ಮಾತುಗಳು,  ಸಂಚಿಕೆ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ  ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಸಮರೋಪ ಸಮಾರಂಭದಲ್ಲಿ   ಸಮ್ಮೇಳನ ಅಧ್ಯಕ್ಷರಾದ ಡಾ.ಜೆ. ಕರಿಯಪ್ಪ ಮಾಳಿಗೆಯವರ ಭಾಷಣ ಇರುತ್ತದೆ.  ಮಾಜಿ ಸಚಿವರಾದ ಡಿ ಸುಧಾಕರ್ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಅಸ್ಗರ್ ಅಹಮದ್, ಶಿವಮೂರ್ತಿ ಮಹಮದ್ ಅಬ್ಬಾಸ್ ಉಪಸ್ಥಿತರಿದ್ದರು.