ಹಿರಿಯೂರಿನಲ್ಲಿ ಕೋವಿಡ್ -೧೯ ಕಾಳಜಿ ಕೇಂದ್ರ ತೆರೆಯಲು ನೆರವು

ಚಿತ್ರದುರ್ಗ. ಜೂ.೩: ಕೋವಿಡ್ -೧೯ ನಿಗ್ರಹಿಸಲು  ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನ್  ಕಷ್ಟಕರ ಆಗಿರುವುದರಿಂದ  ಹಿರಿಯೂರು ತಾಲೂಕು ಆಡಳಿತದ  ಮನವಿಯ ಮೇರೆಗೆ  ಜಿಲ್ಲೆಯ ಪ್ರಕಾಶ್ ಸ್ಪಾಂಜ್  ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಿರಿಯೂರಿನ   ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ  100 ಹಾಸಿಗೆಯ ಕೋವಿಡ್ ಕಾಳಜಿ ಕೇಂದ್ರ ಸ್ಥಾಪನೆ ಮಾಡುಲು ಸಂಪೂರ್ಣ  ಸಹಾಯ ಹಸ್ತ ಚಾಚಿದ್ದು ಇಂದು ಹಿರಿಯೂರು ಶಾಸಕಿಯವಾರಾದ  ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್   ಇವರು ಉದ್ಘಾಟಿಸಿದರು , ಈ ಸಂದರ್ಭದಲ್ಲಿ ಹಿರಿಯೂರು ತಹಶೀಲ್ಧರ್  ಸತ್ಯನಾರಾಯಣ , ಉಪ ಪೊಲೀಸ್ ವರಿಷ್ಠಾಧಿಕಾರಿ   ರೋಷನ್, ಸರ್ಕಾರೀ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ   ವಾಸುದೇವ, ಹಿರಿಯೂರು ನಗರಸಭೆ  ಕಮಿಷನರ್    ಲೀಲಕ್ಕ, ನಗರಸಭೆ ಅಧ್ಯಕ್ಷರು   ಶಮಸುನ್ನಿಸಾ, ಪ್ರಕಾಶ್ ಸ್ಪಾಂಜ್ ಅಧಿಕಾರಿಗಳಾದ    ರಾಜೇಂದ್ರ  ಕುಮಾರ್, ಮಂಜುನಾಥ್ ,ರುದ್ರಪ್ಪ, ಗುರುರಾಜ್ ಮತ್ತು ವಿನಯ್ ಹಾಜರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯೂರು ಶಾಸಕಿಯವರಾದ  ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ವ ಇವರು ಕೋವಿಡ್ ಕಾಳಜಿ ಕೇಂದ್ರಕ್ಕೆ ಕಂಪನಿಯವರು   100 ಮಂಚ, ಹಾಸಿಗೆ, ದಿಂಬು , ಕಸದ ಬುತ್ತಿ , ಬ್ಲಾಂಕೆಟ್ , ಹೊದಿಕೆ , ಸೊಳ್ಳೆ ಪರದೆ , ಕುಡಿಯುವ ನೀರಿನ ವ್ಯವಸ್ಥೆ, ಬೆಡ್ ಸೈಡ್ ಲಾಕರ್,  ಬಿಸಿನೀರಿಗಾಗಿ ಗೀಜರ್  ದೇಣಿಗೆ  ನೀಡಿರುವುದು  ಕೋವಿಡ್ ರೋಗೋಗಳಿಗೆ ಸಹಕಾರಿಯಾಗಲಿದ್ದು  ತಮ್ಮ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿಯಡಿ ಈ  ಕೋವಿಡ್ ಕಾಳಜಿ ಕೇಂದ್ರ  ಸ್ಥಾಪಿಸಿರುತ್ತಾರೆ. ಕೋವಿಡ್ ಕಾಳಜಿ ಕೇಂದ್ರ  ಸ್ಥಾಪನೆಯಿಂದಾಗಿ   ಕೋವಿಡ್   ಹರಡುವಿಕೆಯನ್ನು  ತಡೆಯಲು   ಪರಿಣಾಮಕಾರಿಯಾಗಲಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು .  ಇದೆ ಸಂದರ್ಭದಲ್ಲಿ ಶಾಸಕಿಯವರಾದ  ಪೂರ್ಣಿಮಾ ಶ್ರೀನಿವಾಸ್ರವರು  ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ  ಅಧ್ಯಕ್ಷರಾದ ಆರ್.  ಪ್ರವೀಣ್ ಚಂದ್ರ ಇದ್ದರು.