ಹಿರಿಯೂರಿನಲ್ಲಿ ಅರ್ಚಕರಿಗೆ ಆಹಾರಕಿಟ್ ವಿತರಣೆ

ಹಿರಿಯೂರು ಜೂ. 9: ಹಿರಿಯೂರು ತಾಲ್ಲೂಕಿನ ‘ಸಿ’ ಶ್ರೇಣಿಯ ಮುಜರಾಯಿ ದೇವಸ್ಥಾನಗಳ ಅರ್ಚಕ ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ಗಳನ್ನು ಹಿರಿಯೂರು ತಾಲೂಕು ಕಚೇರಿ ಸಭಾಂಗಣದಲ್ಲಿ  ತಹಶೀಲ್ದಾರ್ ಜಿ ಹೆಚ್ ಸತ್ಯನಾರಾಯಣ್ ರವರ  ಮಾರ್ಗದರ್ಶನ ದಲ್ಲಿ  ವಿತರಿಸಲಾಯಿತು . ಕಛೇರಿ ಶಿರಸ್ತೆದಾರರಾದ  ಕೆ ಟಿ ತಿಪ್ಪೇಸ್ವಾಮಿ,  ಪಿ.ವಿ.ಸುರೇಶ್, ಜೆ.ರಾಜು ಹಾಗೂ ವಿಷಯ ನಿರ್ವಾಹಕ ಬಿ.ಚನ್ನಬಸವರಾಜ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳಾದ ಜೆ.ಎ೦.ಪಿ.ಎನ್. ಸ್ವಾಮಿ  ಆಹಾರದ ಕಿಟ್  ವಿತರಣೆ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು