ಹಿರಿಯೂರಿನಲ್ಲಿ ಅಂಬಿಗರ ಚೌಡಯ್ಯ ಜಯಂತಿ 

ಹಿರಿಯೂರು:  ಜ.22-ಹಿರಿಯೂರಿನ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಶಿರಸ್ತೇದಾರ್ ತಿಪ್ಪೇಸ್ವಾಮಿಯವರು ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಮನೋಹರ್, ನಗರಸಭೆ ಅಧ್ಯಕ್ಷರಾದ ಗೀತಾ ಗಂಗಾಧರ್, ಸದಸ್ಯರಾದ ವಿಶಾಲಾಕ್ಷಮ್ಮ, ಅಂಬಿಗರ ಚೌಡಯ್ಯ  ಸಮಾಜದ ಅಧ್ಯಕ್ಷರಾದ ಗಂಗಾಧರ್,  ರಂಗಸ್ವಾಮಿ, ಕಿರಣ್ ಕುಮಾರ್ ಹೆಂಜಾರಪ್ಪ,  ಶ್ರೀನಿವಾಸ್, ರಮೇಶ್ ಕಾಡಪ್ಪ, ದಿವುಶಂಕರ್, ಜೋತಮ್ಮ ದಾಕ್ಷಾಯಣಮ್ಮ ಸೋಮಶೇಖರ್ ಅಂಬಿಕಾ ಶ್ರೀನಿವಾಸ ರೆಡ್ಡಿ ಚನ್ನಬಸವರಾಜು ಹಾಗೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.