ಹಿರಿಯರ ಶ್ರೀರಕ್ಷೆ ದೊಡ್ಡ ಬಲ :ಡಾ. ಉಮೇಶ್ ಜಾಧವ್

ಕಲಬುರಗಿ:ಮಾ.2: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು,ಮಾಜಿ ಜಿಲ್ಲಾ ಕೋಶಾಧಿಕರಿಗಳಾಗಿದ್ದ ವಯೋವೃದ್ಧರೂ ಆಗಿರುವ ಮಹಾದೇವಪ್ಪ ಕಡೇಚೂರ್ ಅವರ ನಿವಾಸದಲ್ಲಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಭೇಟಿ ಮಾಡಿ ಆಶೀರ್ವಾದ ಪಡೆದರು.
ಕಲ್ಬುರ್ಗಿಯ ಜಗತ್ ಪ್ರದೇಶದಲ್ಲಿರುವ ಕಡೇಚೂರ್ ನಿವಾಸಕ್ಕೆ ಇಂದು (ಮಾರ್ಚ್ 2ರಂದು ಶನಿವಾರ) ಭೇಟಿ ಮಾಡಿ 94 ವರ್ಷದ ಹಿರಿಯರಾದ ಮಹದೇವಪ್ಪ ಕಡೆಚೂರ್ ಅವರನ್ನು ಭೇಟಿ ಮಾಡಿ ಅವರ ಜೊತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಇಬ್ಬರು ಚರ್ಚಿಸಿದರು. ಮೊದಲ ಬಾರಿಗೆದ್ದು ಲೋಕಸಭೆಯಲ್ಲಿ ಉತ್ತಮವಾಗಿ ಚರ್ಚೆಯಲ್ಲಿ ಪಾಲ್ಗೊಂಡಿರುವುದನ್ನು ನಾನು ಕೂಡಾ ನೋಡಿ ಖುಷಿಯಾಗಿದ್ದೇನೆ. ಪ್ರಗತಿ ಕಾರ್ಯಗಳನ್ನು ಕೂಡಾ ಉತ್ತಮವಾಗಿ ಮಾಡಿದ್ದು ಇನ್ನೊಂದು ಬಾರಿಯೂ ಗೆದ್ದು ಜನಸೇವೆ ಮಾಡುವಂತಾಗಲಿ ಪ್ರಾಮಾಣಿಕತನದಿಂದ ಅಹರ್ನಿಶಿ ದುಡಿಯುವ ಜನಪ್ರತಿನಿಧಿಗಳು ಹಾಗೂ ದೇಶಕ್ಕೆ ಮಾದರಿಯಾಗಬಲ್ಲ ನಾಯಕರ ತುರ್ತು ಅಗತ್ಯ ಈ ದೇಶಕ್ಕಿದ್ದು ನಿಮಗೆ ಯಶಸ್ಸು ಸಿಗಲಿ ಎಂದು ಮಹಾದೇವಪ್ಪ ಕಡೇಚೂರ್ ಜಾಧವ್ ಅವರಿಗೆ ಶುಭ ಹಾರೈಸಿದರು.
ಉಮೇಶ್ ಜಾಧವ್ ಅವರು ಶಾಲು ಮತ್ತು ಹಾರದೊಂದಿಗೆ ಹಿರಿಯ ಚೇತನರಾದ ಮಹಾದೇವಪ್ಪ ಕಡೇಚೂರ್ ಅವರನ್ನು ಗೌರವಿಸಿದರು. ತಮ್ಮ ಕುರಿತಾಗಿ ಪ್ರಕಟಗೊಂಡ “ಅನನ್ಯ ಮಹಾದೇವ” ಅಭಿನಂದನ ಗ್ರಂಥವು ಅಪೂರ್ವ ವಾಗಿದ್ದು ಮತ್ತು ಆ ಕೃತಿಯನ್ನು ದೆಹಲಿಯ ಗೃಹ ಸಚಿವರಾದ ಅಮಿತ್ ಶಾ ಅವರ ಮನೆಯಲ್ಲಿ ನೋಡಿ ತುಂಬಾ ಖುಷಿಯಾಯಿತು. ತಮ್ಮಂತಹ ಹಿರಿಯರ ಆಶೀರ್ವಾದವೇ ನಮ್ಮಂತಹ ಜನಪ್ರತಿನಿಧಿಗಳಿಗೆ ಶ್ರೀ ರಕ್ಷೆ ಎಂದು ಜಾದವ್ ಹೇಳಿದರು.ಈ ಸಂದರ್ಭದಲ್ಲಿ ಡಾ. ರಾಜೇಶ್ ಕಡೇಚೂರ್ ಮತ್ತು ಮಹೇಶ್ ಕಡೇಚೂರ್ ಸಂಸದರನ್ನು ಬರಮಾಡಿಕೊಂಡರು ಜಗತ್ ಪ್ರದೇಶದ ಬಿಜೆಪಿಯ ಪ್ರಶಾಂತ್ ಗುಡ್ಡ, ಸುನಿಲ್ ವ0ಟಿ ಮತ್ತಿತರು ಉಪಸ್ಥಿತರಿದ್ದರು. ಬಳಿಕ ಜಗತ್ ನಲ್ಲಿರುವ ಶ್ರೀ ಹನುಮಾನ್ ಗುಡಿ ಆವರಣದಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ, ಸಂಸದರ ನಿಧಿಯಿಂದ ನೆರವಿನ ಭರವಸೆಯನ್ನು ನೀಡಿದರು.