ಹಿರಿಯರ ರಕ್ಷಣೆ ಮರೆತರೆ ಕಾನೂನು ಕ್ರಮ

ಹಟ್ಟಿಚಿನ್ನದಗಣಿ,ಜೂ.೧೧-
ನಿವೃತ್ತರನ್ನು ವಯೋವೃದ್ಧರನ್ನು ಖಿನ್ನತೆಗೆ ಒಳಗಾಗದಂತೆ ಪಾಲನೆ-ಪೋಷಣೆ ಮಾಡುವುದು ಕುಟುಂಬಸ್ಥರ ಆದ್ಯಕರ್ತವ್ಯವಾಗಿದ್ದು, ಜವಬ್ದಾರಿ ಮರೆತರೆ ಕುಟುಂಬಸ್ಥರ ವಿರುದ್ಧ ಕಾನೂನು ತನ್ನ ಕ್ರಮಕೈಗೊಳ್ಳಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರೀಷ್ಠಾಧಿ ಕಾರಿ ಡಾ. ಆರ್.ಶಿವಕುಮಾರ್ ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಹಟ್ಟಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಹಿರಿಯ ನಾಗರೀಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಿವೃತ್ತಿ ಜೀವನ, ವಯೋಸಹಜ ಕಾಯಿಲೆ ಹಾಗೂ ವೃಧಾಪ್ಯದ ನೋವು ಆವರಿಸದಂತೆ ಕುಟುಂಬದ ಸದಸ್ಯರು ಹಿರಿಯರನ್ನು ಗೌರವದಿಂದ ಕಾಣಬೇಕು. ಪೊಲೀಸ್ ಇಲಾಖೆ ಬಗ್ಗೆ ಯಾವುದೆ ಪೂರ್ವಾಗ್ರಹ ಪೀಡಿತರಾಗಬಾರದು. ಕಚೇರಿಯಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶಗಳಿವೆ. ಯಾವುದೆ ಕುಂದುಕೊರತೆಯಿದ್ದರು ಸಹಿತ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಒಬ್ಬ ಕಾನ್‌ಸ್ಟೇಬಲ್‌ರಿಂದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳವರೆಗೆ ನೇರವಾಗಿ ಸಂಪರ್ಕಿಸಬಹುದು ಎಂದರು.
ಪಟ್ಟಣದ ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ಮಾತನಾಡಿ ಹಟ್ಟಿಯಲ್ಲಿ ನಿವೃತ್ತ ಬಡ ಕಾರ್ಮಿಕರಿಗೆ ನೆಲೆಯಿಲ್ಲದೆ ಜೀವನ ನಡೆಸುವುದು ದುಸ್ತರವಾಗಿದ್ದು, ವೃದ್ಧಾಶ್ರಮದ ಅವಶ್ಯಕತೆಇದ್ದು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಡಿವೈಎಸ್ಪಿ ಎಸ್.ಮಂಜುನಾಥ್, ಸಿಪಿಐ ಪ್ರಕಾಶ್ ಎಲ್.ಮಾಳಿ ಮಾತನಾಡಿದರು. ಮಾಜಿ ತಾ.ಪಂ ಸದಸ್ಯ ರಾಜಾಸೇತುರಾಂ ನಾಯಕ್, ಎನ್.ಸ್ವಾಮಿ ನಾಯಿಕೋಡಿ, ರಾಚಯ್ಯ ಸ್ವಾಮಿ, ಬಸನಗೌಡ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳ ಹಿರಿಯ ನಾಗರೀಕರು ಸೇರಿದ್ದರು.
ಡಿವೈಎಸ್ಪಿ ಎಸ್.ಮಂಜುನಾಥ್, ಸಿಪಿಐ ಪ್ರಕಾಶ್ ಎಲ್.ಮಾಳಿ, ಪಿಎಸೈ ಧರ್ಮಣ್ಣ, ಎಎಸೈ ಶೇಖ್ ರಹೀಮಾನ್ ಸಿಬ್ಬಂದಿ ಹುಚ್ಚರೆಡ್ಡಿ, ಶರಣಬಸವ, ರಾಘವೇಂದ್ರ, ಹನುಮಂತನಾಯ್ಕ್, ಶ್ರೀದೇವಿ, ಅಮರೇಶ್, ಶಿವಾನಂದ್ ಒಡೆಯರ್, ಮಾರುತಿ ಇದ್ದರು.