ಹಿರಿಯರ ಮಾರ್ಗದರ್ಶನ ಪಡೆದಾಗ ಮಾತ್ರ ಕುಟುಂಬ ಜೀವನ ಅಭಿವೃದ್ಧಿ ಆಗಲು ಸಾಧ್ಯಃ ಶ್ರೀಮತಿ ಸುಜಾತಾ.ಕಳ್ಳಿಮನಿ

ವಿಜಯಪುರ, ಮಾ.25-ನಗರದ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘವು 75 ವರ್ಷ ತುಂಬಿದ ಹಿರಿಯ ಸದಸ್ಯರ ಸನ್ಮಾನ ಸಮಾರಂಭ ಎನ್.ಜಿ.ಓ.ಹಾಲ್ ವಿಜಯಪುರದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರುಣಿಸುವ ಮೂಲಕ ಶ್ರೀಮತಿ ಸುಜಾತಾ.ಕಳ್ಳಿಮನಿ ಅಧ್ಯಕ್ಷರು ಜಿಲ್ಲಾ ಪಂಚಾಯತ ವಿಜಯಪುರ ಅವರು ಮಾಡಿ, ಕಿರಿಯರು ಸದಾ ಹಿರಿಯರ ಮಾರ್ಗದರ್ಶನ ಪಡೆದಾಗ ಮಾತ್ರ ಕುಟುಂಬ ಜೀವನ ಅಭಿವೃದ್ಧಿ ಆಗಲು ಸಾಧ್ಯವೆಂದು ಹೇಳಿದರು.
75 ವರ್ಷ ತುಂಬಿದ ಹಿರಿಯ ಸದಸ್ಯರ ಸನ್ಮಾನ ಮಾಡಲಾಯಿತು. ದಿವ್ಯ ಸಾನಿದ್ಯ ವಹಿಸಿದ್ದ ಪ.ಪೂ.ಯೊಗೇಶ್ವರಿ ಮಾತಾಜಿ ಅವರು ಹಿರಿಯರು ಅನುಭವದ ಖಣಿಯಾಗಿರುತ್ತಾರೆ, ಅವರಿಂದ ನಾವೆಲ್ಲಾ ಜ್ಯ್ನಾನವನ್ನು ಪಡೆದೂಕೊಳ್ಳಬೇಕೆಂದು ಹೇಳಿದರು.
ಸಾನಿದ್ಯ ವಹಿಸಿದ್ದ ಪ.ಪೂ.ವಿರೂಪಾಕ್ಷ ದೇವರು ಓಂಕಾರೇಶ್ವರ ಆಶ್ರಮ ವಿಜಯಪುರ ಅವರು, ಹಿರಿಯರು ವಾಕಿಂಗ್, ಯೋಗ, ಧ್ಯಾನ, ವ್ಯಾಯಾಮ, ಮಾಡುತ್ತಾ ಆರೋಗ್ಯವನ್ನು ಕಾಯ್ದುಕೊಳ್ಳಬೇಕೆಂದು ಹೇಳಿದರು.
ರಮೇಶ ಕಳಸದ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ವಿಜಯಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಇಲ್ಲಿ ಕೂಡಿದ ಹಿರಿಯರ ಉತ್ಸಾಹವನ್ನು ನೋಡಿದರೆ, ನಾವು ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆಯೆಂದು ಹೇಳಿದರು.
ಶ್ರೀಮತಿ ಉಷಾದೇವಿ. ಹಿರೇಮಠ ಉಪನ್ಯಾಸಕರು, ಕುಟುಂಬ ಜೀವನದ ಸಂಸ್ಕಾರ, ಒಕ್ಕಟ್ಟು, ಸಹಬಾಲ್ವೆ, ಸಮರಸ ಜೀವನ ಇವೆಲ್ಲಾ ಹಿರಿಯರು ಕಲಿಸಿದ ಪಾಠಗಳೆಂದು ಹೇಳಿದರು.
ಎಸ್.ಪಿ ಬಿರಾದಾರ (ಕಡ್ಲೇವಾಡ) ಅದ್ಯಕ್ಷರು ಇಂಥ ಕಾರ್ಯಕ್ರಮಗಳು ಯಶಸ್ವಿ ಆಗಲು ಎಲ್ಲ ಸದಸ್ಯರ ಸಹಾಯ ಸಹಕಾರವೆ ಮುಖ್ಯ ಕಾರಣವೆಂದು ಹೇಳಿದರು.
ಸಭೆಯಯಲ್ಲಿ ಸುರೇಶ್ ಶೇಡಶ್ಯಾಳ ಅದ್ಯಕ್ಷರು ಕ.ರಾ.ಸ.ನೌ.ಸಂಘ ವಿಜಯಪುರ, ಎಂ.ಎನ್. ದಿಂಡೂರ ನಿವೃತ್ತ ಪ್ರಾಚಾರ್ಯರು, ಕರ್ನಾಟಕ ರಾಜ್ಯ ನಿವೃತ ನೌಕರರ ಸಂಘಗಳ, ತಾಲೂಕಾ ಅದ್ಯಕ್ಷರುಗಳಾದ, ಎಫ್.ಡಿ.ಮೇಟಿ, ಸಿ.ಕೆ. ಕುದರಿ, ಡಿ.ಟಿ. ಆಯಿತವಾ ಡ .ಎಂ.ಜಿ.ಮೋಟಗಿ, ವ್ಹಿ.ಆರ್.ನರಳೆ, ಬಿ.ವ್ಹಿ.ಕತಕನಹಳ್ಳಿ ಮತ್ತು ಎಸ್.ಎನ್.ಬಿರಾದಾರ, ಎಸ್.ಕೆ. ಸೊಮನಕಟ್ಟಿ, ವ್ಹಿ.ಎಸ್.ಜಾಮಗೊಂಡಿ ಬೊಮ್ಮನಹಳ್ಳಿ, ಎ.ಎಸ್.ಡೋನೂರ, ಬಿ.ಎಂ.ಮುಂಬೈ, ಎಸ್.ವೈ. ನಡುವಿನಕೆರಿ, ವ್ಹಿ.ಎಸ.ಸಾವಳಗಿಮಠ, ಎಸ್.ಬಿ.ಬುಯಾರ, ಎಸ್.ಎಸ್.ಮಾವಿನ ಗಿಡದ, ಎಸ್.ಜಿ. ಮುರನಾಳ, ಎನ್.ಆಯಿ.ಪಾಟೀಲ್, ಡಾ.ಎಸ್.ಎಸ್.ಅನ0ತಪುರ, ಎಸ್.ಸಿ.ಕಟಾಯಿ, ಶ್ರೀಮತಿ ಬಿ.ಎಸ್.ಹೊನಬರಟ್ಟಿ, ಅಕ್ಕಮಹಾದೇವಿ ಹೊಸೂರ, ಶ್ರೀಮತಿ ಎ.ಆರ್.ಮದರಳ್ಳಿ ಮುಂತಾದವರು ಹಾಜರಿದ್ದರು.
ನಾಗೇಶ.ಡೋಣೂರ, .ಸೊಮಶೇಖರ. ರಾಠೋಡ, ಭಾರತ ಸೇವಾದಳ ನಾಡಗೀತೆ ಹಾಡಿದರು. ಎಸ್.ಎಸ್. ಬನಜಿಗೆರ ಪ್ರಾರ್ಥಿಸಿದರು, ಡಿ.ಬಿ.ಹಿರೇಕುರುಬರ ಸ್ವಾಗತಿಸಿದರು. ಭರತೇಶ ಕಲಗೊಂಡ ಕಾರ್ಯಕ್ರಮ ನಿರೂಪಣೆ ಮಾಡಿದರು. ಎಂ.ಎನ್.ಚೆಪ್ಪರಬಂದ ವಂದಿಸಿದರು.