ಹಿರಿಯರ ಮಾತು ಗೌರವಿಸಲು ಕರೆ


ಬಾದಾಮಿ,ಮಾ.8: ವಿದ್ಯಾರ್ಥಿಗಳು ತಂದೆತಾಯಿ, ಗುರು ಹಿರಿಯರ ಮಾತನ್ನುಗೌರವಿಸಬೇಕು.ಅವರು ನಿಮ್ಮ ಮೇಲೆ ಅಪಾರವಾದ ಭರವಸೆಯಕನಸನ್ನುಕಟ್ಟಿಕೊಂಡಿರುತ್ತಾg ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್.ಬಿ.ಎಮ್. ಪದವಿ ಕಾಲೇಜಿನಕನ್ನಡ ಪ್ರಾಧ್ಯಾಪಕರಾದ ಶಿವುಕುಮಾರ ಅಂಗಡಿ ಹೇಳಿದರು.
ಅವರು ಶ್ರೀ.ವೀ.ಪು.ವಿ.ವ. ಸಂಸ್ಥೆಯ, ಶ್ರೀ ಎಸ್.ಬಿ. ಚನ್ನಪ್ಪಗೌಡರ ಬಾಲಕಿಯರ ಪ್ರೌಢಶಾಲೆ, ಬಾದಾಮಿ 2023-24 ನೇ ಸಾಲಿನ ಸಾಂಸ್ಕøತಿಕ ಚಟುವಟಿಕೆಗಳ ಮುಕ್ತಾಯ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರಿಗೆ ಶುಭಕೋರುವ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿ. ಅವರು ನಿಮ್ಮ ಮೇಲೆ ಅಪಾರವಾದ ಭರವಸೆಯಕನಸನ್ನುಕಟ್ಟಿಕೊಂಡಿರುತ್ತಾರೆಅದರ ಪ್ರತಿಫಲವಾಗಿ ನೀವು ಇಷ್ಟ ಪಟ್ಟು ಓದಿ ಸಂಸ್ಥೆಗೆ ಕೀರ್ತಿತರುವ ವಿದ್ಯಾರ್ಥಿಗಳಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆವಹಿಸಿದ ಸಂಸ್ಥೆಯಗೌರವ ಕಾರ್ಯದರ್ಶಿಗಳಾದ ಎಸ್.ಡಿ. ಫತ್ತೇಪೂರ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನಅವಶ್ಯಕವಾಗಿದೆ ಶಿಕ್ಷಣ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಹಾಗೂ ಪರೀಕ್ಷೆಯನ್ನುಧೈರ್ಯದಿಂದಎದರಿಸಲುಕರೆ ನೀಡಿದರು.
ವೇದಿಕೆಯಲ್ಲಿ ಶಾ.ಸು.ಸಮಿತಿಯ ಸದಸ್ಯರಾದ ಎಮ್.ಎಸ್. ಹಿರೇಹಾಳ, ಎಸ್.ಜಿ. ಮೇಟಿ, ಶ್ರೀಮತಿ ಅನಸೂಯಾ ಹೊಸಮನಿ, ಶ್ರೀಮತಿ ನಿರ್ಮಲಾ ಮಟ್ಟಿ, ಜೆ.ಎಮ್.ಮಿಟ್ಟಲಕೋಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಜರುಗಿತು. ಮುಖ್ಯಾಧ್ಯಾಪಕರಾದ ಪಿ.ಎ. ಹಿರೇಮಠ ಸ್ವಾಗತಿಸಿದರು, ಎಸ್.ಬಿ. ಶಿವಶಿಂಪಿ ಪರಿಚಯಿಸಿದರು. ಎನ್.ಬಿ. ಶೀಲವಂತಕಾರ್ಯಕ್ರಮ ನಿರೂಪಿಸಿದರು, ಎಸ್.ಬಿ. ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶಿವಲೀಲಾ ಮೆನದಾಳ, ಕೌಶಲ್ಯ ಸಿಂಗನ್ನವರ, ಸಂಗೀತಾ ಮರಿಯಣ್ಣವರ, ರೇಷ್ಮಾರಾಜೂರತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ನಮ್ಮ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ ಜೊತೆಗೆ ಆಟ ಪಾಠಗಳ ಸೇರಿದಂತೆವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ನಮಗೆಲ್ಲ ಸಂತೋಷತಂದಿದೆಎಂದರು.