ಹಿರಿಯರು, ವಿಶೇಷ ಚೇತನರಿಂದ “ಮನೆಯಿಂದಲೇ ಮತದಾನ”ಕ್ಕೆ ಉತ್ತಮ ಸ್ಪಂದನೆ : ಜಿಲ್ಲಾಧಿಕಾರಿ ಸ್ನೇಹಲ್.ಆರ್

ಯಾದಗಿರಿ : ಮೇ 05 : ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 80 ವರ್ಷದ ಮೇಲ್ಪಟ್ಟವರು ಹಾಗೂ ಮತ್ತು ವಿಕಲಚೇತನ ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕೊಡಲಾಗಿದೆ. 80 ವರ್ಷ ಮೀರಿದ ಹಾಗೂ ವಿಕಲಚೇತನ ಮತದಾರರು ಮನೆಯಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ 80 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ 586 ಮಂದಿ ಮತದಾರರು ಜೊತೆಗೆ 90 ವಿಶೇಷ ಚೇತನ ಮತದಾರರು ಸೇರಿ ಒಟ್ಟು 676 ಮತದಾರರು ಮನೆಯಿಂದಲೇ ಮತ ಚಲಾಯಿಸಲು ಒಪ್ಪಿಗೆ ಕೊಟ್ಟಿದ್ದರು.
ಮೇ 03 ಮತ್ತು ಮೇ 04 ರಂದು ರಂದು ನಡೆದ ಮತದಾನದಲ್ಲಿ 564 ಹಿರಿಯ ನಾಗರಿಕ ಮತದಾರರು, 89 ವಿಕಲಚೇತನ ಮತದಾರರು ಸೇರಿ ಒಟ್ಟು 653 ಮತದಾರರು ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿದ ಹಿರಿಯ ಮತದಾರರು ಹಾಗೂ ವಿಕಲಚೇತನರು ಭಾರತ ಚುನಾವಣಾ ಆಯೋಗದ ಈ ಒಂದು ಕಾರ್ಯಕ್ಕೆ ಅತ್ಯಂತ ಹರ್ಷ ವ್ಯಕ್ತಪಡಿಸಿ ಉತ್ಸಾಹದಿಂದ ಮತ ಚಲಾಯಿಸಿ ಉಳಿದೆಲ್ಲ ಮತದಾರರಿಗೆ ಮತ ಚಲಾಯಿಸಲು ಪ್ರೇರಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.