ಹಿರಿತೆರೆಗೆ ವಿನು ಬಳಂಜ ಅದೃಷ್ಠ ಪರೀಕ್ಷೆಗೆ ಸಜ್ಜು

* ಚಿ.ಗೋ ರಮೇಶ್

ವಿನು ಬಳಂಜ, ಕಿರುತೆರೆಯಲ್ಲಿ ಈ ಹೆಸರು ಕೇಳದವರು ತೀರಾ ಅಪರೂಪ, ಒಂದಷ್ಟು ದಿನ ವಿವಿಧ ಕಾರಣದಿಂದ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದ ವಿನು ಬಳಂಜ ಇದೀಗ ‘ಬೇರ” ಚಿತ್ರದ ಮೂಲಕ ಹಿರಿತೆರೆಯಲ್ಲಿ ಅದೃಷ್ಠ ಪರೀಕ್ಷೆಗೆ ಸಜ್ಜಾಗಿದ್ದಾರೆ.

‘ಬೇರ’ ಎಂದರೆ ತುಳು ಭಾಷೆಯಲ್ಲಿ ವ್ಯಾಪಾರ ಎಂದರ್ಥವಂತೆ. ಒಂದಷ್ಟು ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಘಟನೆಗಳನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಬೇರ ಚಿತ್ರದ ಮೂಲಕ ವಿನು ಬಳಂಜ ಮಾಡಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ವಿನು ಬಳಂಜ,ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಎನ್ನುವ ಮನ ಮುಟ್ಟುವ ಕಥಾ ಹಂದರ ಚಿತ್ರದಲ್ಲಿದೆ. “ಯಾವ ತಾಯಂದಿರಿಗೂ ಮಕ್ಕಳು ಇನ್ನೊಬ್ಬರಿಂದ ಸಾಯಬಾರದು ಎನ್ನುವುದೇ ಚಿತ್ರ ತಿರುಳು, ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ತರುವ ಯೋಜನೆ ಇದೆ ಎನ್ನುವ ಮಾಹಿತಿ ನೀಡಿದರು.

ಈ ಮುಂಚೆ ಸಿನಿಮಾ ಕೈಗೆತ್ತಿಕೊಳ್ಳಲಾಗಿತ್ತು ಕಾರಣಾಂತರದಿಂದ ಅದು ಅರ್ದಕ್ಕೆ ನಿಂತುಹೋಯಿತು. ಜೊತೆಗೆ ವಯಕ್ತಿಕ‌ ಸಮಸ್ಯೆಯಿಂದ ಚಿತ್ರ ನಿರ್ದೇಶನ ಮಾಡುವುದು ತಡವಾಯಿತು.ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ಭರವಸೆ ನೀಡಿದರು.

ನಟಿ ಹರ್ಷಿಕಾ ಪೂಣಚ್ಚ, ಚಿತ್ರದಲ್ಲಿ ಎರಡು ಶೇಡ್ ಪಾತ್ರವಿದೆ. ಹಿರಿಯ ನಟರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ಇದೆ ಎಂದು ಮಾಹಿತಿ ಹಂಚಿಕೊಂಡರು

 ಹಿರಿಯ ಕಲಾವಿದೆ ಚಿತ್ಕಳಾ ಬಿರಾದಾರ್, ತಾಯಿ ಪಾತ್ರ. ತುಂಬಾ ಇಂಟೆನ್ಸ್ ಆಗಿದೆ. ಚಿಕ್ಕಪಾತ್ರವಾದರೂ ಮನಸ್ಸಿನಲ್ಲಿ ಕಾಡುತ್ತೆ.. ಕಿರುತೆರೆ ಬಳಿಕ ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶವಿದೆ ಎಂದರು

ನಟ ಯಶ್ ಶೆಟ್ಟಿ ಚಿತ್ರದ ಬಗ್ಗೆ ಮಾಹಿತಿ ನೀಡಿ,ಯಾವ ಮಕ್ಕಳು ತಾಯಿಯ ಮುಂದೆ ಇನ್ನೊಬ್ಬರ ಮುಂದೆ ಸಾಯಬಾರದು ಎನ್ನುವುದನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ .ಸೂಕ್ಷ್ಮಾತಿ ಸೂಕ್ಷ್ಮ ವಿಷಯ ಚಿತ್ರದಲ್ಲಿದೆ ಎಂದರು.

ಹಿರಿಯ ನಟ ದತ್ತಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ. ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ ಎಂದು ಹೇಳಿದರು. ನಿರ್ಮಾಪಕ ದಿವಾಕರ ದಾಸ ಮಾತನಾಡಿ ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.

ಮತ್ತೊಬ್ಬ ಕಲಾವಿದ‌ ಮಂಜುನಾತ್ ಹೆಗ್ಡೆ,  ಚಿತ್ರ ಆರಂಭವಾಗುವ ವೇಳೆ  ತೂಕ ಕಡಿಮೆಯಾಗಿದ್ದೆ. ಚಿತ್ರದಲ್ಲಿ ಪಾತ್ರ ಮಾಡಿ ಎಂದಾಗ ಇಲ್ಲ ಎಂದೆ.ಅದಕ್ಕೆ ನಿರ್ದೇಶಕರು ಪಾತ್ರವನ್ನೇ ಸಣ್ಣ ಮಾಡಿದ್ದೇನೆ ಮಾಡಿ ಎಂದರು ಆಗ ಇಲ್ಲ ಎನ್ನದೆ ಅನಿವಾರ್ಯವಾಗಿ ನಟಿಸುವಂತಾಯಿತು ಎಂದು.

ನಟ ರಾಕೇಶ್ ಮಯ್ಯ , ಮಂಜುನಾಥ್ ಹೆಗಡೆ ,ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ “ಬೇರ” ಚಿತ್ರದ ಕುರಿತು ಮಾತನಾಡಿದರು.

ಬಹುದಿನದ ಆಸೆ

ನಿರ್ದೇಶಕ ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಬೇಕೆನ್ನುವುದು ಬಹುದಿನದ ಆಸೆ ಎಂದು ಚಿತ್ರದಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ,  ಚಿತ್ಕಳಾ ಬಿರಾದಾರ್, ಯಶ್ ಶೆಟ್ಟಿ, ರಾಕೇಶ್ ಮಯ್ಯ ಸೇರಿದಂತೆ ಹಲವು ಕಲಾವಿದರು ತಮ್ಮ ಬಯಕೆ ಹೊರಹಾಕಿ ಬೇರ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದರಿ