
ಕಲಬುರಗಿ,ಆ.24: ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹಾರಾಜ ನಿರಗುಡಿಯವರು ಸಧ್ಯ ಉತ್ತರ ಭಾರತದ ಯಾತ್ರೆಯಲ್ಲಿದ್ದು ಪುಜ್ಯರ ಭಕ್ತರು ಹಾಗೂ ಸಮಿತಿಯ ಸದಸ್ಯರು ಈ ಬಾರಿಯ ಪರಮ ಪುಜ್ಯರ 56ನೇ ವರ್ಷದ ಜನ್ಮ ದಿನೋತ್ಸವವನ್ನು ದಿನಾಂಕ 26-08-2023 ರಂದು ತಮ್ಮ ಸಮಿಪದಲ್ಲಿರುವ ಪುಜ್ಯರ ಆಶ್ರಮಗಳಲ್ಲಿ ಭಕ್ತರೊಂದಿಗೆ ಸಾಮಾಜಿಕ ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಸರಳವಾಗಿ ಆಚರಿಸಬೇಕಾಗಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ ಝಳಕಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಆಗಸ್ಟ್ 26 ರಂದು ಸಾಯಂಕಾಲ 5 ಗಂಟೆಗೆ ಕಲಬುರಗಿ ನಗರದ ಹಿರಾಪುರದಲ್ಲಿರುವ ಶ್ರೀ ಗಣೇಶ ಲಿಂಗ ಹವಾಮಲ್ಲಿನಾಥರ ಆಶ್ರಮದಲ್ಲಿ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ 56ನೇ ವರ್ಷದ ಜನ್ಮ ದಿನೋತ್ಸವ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಕಲಬುರಗಿ ಜಿಲ್ಲಾ ಘಟಕ ಹಾಗೂ ಸಮಸ್ತ ಭಕ್ತಾದಿಗಳ ವತಿಯಿಂದ ಮಾಜಿ ಸೈನಿಕರಿಗೆ, ಪ್ರಗತಿ ಪರ ರೈತರಿಗೆ ಹಾಗೂ ಸಮಾಜಸೇವಕರಿಗೆ ಸತ್ಕರಿಸುವದರೊಂದಿಗೆ ಮತ್ತು ವಿವಿಧ ಸಮಾಜಿಕ ಕಾರ್ಯಗಳನ್ನು ಮಾಡುವದರೊಂದಿಗೆ ಸರಳವಾಗಿ ಆಚರಣೆ ಮಾಡಲಾಗುವುದು, ಈ ಕಾರ್ಯಕಮಕ್ಕೆ ಮಠಾಧೀಶರು, ಶಾಸಕರು, ಹಿರಿಯ ಅಧಿಕಾರಿಗಳು ಹಾಗು ಅನೇಕ ಗಣ್ಯ ವಕ್ತಿಗಳು ಆಗಮಿಸಲಿದ್ದಾರೆ ಎಂದು ಸಮಿತಿಯ ವಕ್ತಾರರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.