ಹಿರಣ್ಯಗೆ ರಿಹಾನಾ ನಾಯಕಿ

ಯುವ ನಟ ರಾಜವರ್ಧನ್  ನಾಯಕನಾಗಿ ಕಾಣಸಿಕೊಂಡಿರುವ “ ಹಿರಣ್ಯ” ಚಿತ್ರಕ್ಕೆ ನಾಯಕಿಯಾಗಿ ರಿಹಾನಾ ಬಣ್ಣ ಹಚ್ಚಿದ್ದಾರೆ. ಇದೀಘ ನಾಯಕಿಯ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಿಹಾನಾ  ಅವರಿಗೆ ಇದು ಮೊದಲ ಚಿತ್ರ ಎಂದು ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ.

ದಿವ್ಯಾ ಸುರೇಶ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರೊಂದಿಗೆ ಹುಲಿ ಕಾರ್ತಿಕ್, ಅರವಿಂದ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಘ್ನೇಶ್ವರ ಯು. ಹಾಗೂ ವಿಜಯ್ ಕುಮಾರ್ ಬಿ. ವಿ ಬಂಡವಾಳ ಹೂಡಿದ್ದಾರೆ.

ಜ್ಯೂಡಾ ಸ್ಯಾಂಡಿ ಸಂಗೀತ, ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಶೀಘ್ರವೇ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ.