ಹಿಮ್ಲಾಪುರ ವಾಂತಿ ಭೇದಿ ಪ್ರಕರಣ ಪರಿಶೀಲನೆ ಮಾಡಿದ ಸಚಿವ ದರ್ಶನಪೂರ

ಗುರುಮಠಕಲ್:ಜೂ.29: ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಗಳಿಂದ ಬರುವ ಪೈಪ್ ಲೈನ್ ಗಳಾಗಲಿ ನೀರಿನ ಟ್ಯಾಂಕ್. ಹಾಗೂ ಸಾರ್ವಜನಿಕರಿಗೆ ಶುದ್ಧ ವಾದ ಕುಡಿಯಲು ನೀರು ಸರಬರಾಜು ಮಾಡುವ ನೀರಿನ ಮೂಲಗಳನ್ನು ಅಧಿಕಾರಿಗಳು ಮೇಲಿಂದ ಮೇಲೆ ಪರಿಶೀಲನೆ ಮಾಡಿ ಸಕಾಲದಲ್ಲಿ ಸ್ವಚ್ಛಗೊಳಿಸ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಪೂರ ಅವರು ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು ಈ ವೇಳೆ ತಾಲೂಕು ಸಮೀಪದಲ್ಲಿರುವ ಹಿಮ್ಲಾಪುರ ಗ್ರಾಮದಲ್ಲಿ ವಾಂತಿಭೇದಿ ಪ್ರಕರಣ ಪರಿಶೀಲನೆ ಹಿನ್ನೆಲೆಯಲ್ಲಿ ಗುರುಮಠಕಲ್ ಸಾರ್ವಜನಿಕ ಸಮುದಾಯ ಆರೋಗ್ಯ ಆಸ್ಪತ್ರೆಗೆ ಹಾಗೂ ಹಿಮ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹಿಮ್ಲಾಪುರ ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಂಡಿದ್ದು ಎಲ್ಲಾರಿಗೂ ಚಿಕಿತ್ಸೆ ವ್ಯವಸ್ಥೆ ಮಾಡುತ್ತಿದ್ದು ಯಾರಿಗೂ ಕೂಡ ಜೀವಹಾನಿ ಇಲ್ಲ ಅ ದೇವರ ಕೃಪೆ ಬಹಳ ದೊಡ್ಡದಿದೆ ಯಾರು ಕೂಡ ಗ್ರಾಮಸ್ಥರು ಅಂತಕ ಪಡಬಾರದು ಅವರೆಲ್ಲರೂ ಅರಾಮವಾಗಿದ್ದಾರೆ ಜೀವಕ್ಕೆ ಹಾನಿ ಯಾಗುವಂತಹ ಯಾವುದೇ ತರಹದ ತೊಂದರೆ ಇಲ್ಲ ಜಿಲ್ಲಾ ಧಿಕಾರಿ ಯವರು ಈ ವೇಳೆ ಗ್ರಾಮ ಪಂಚಾಯತಿ ತಾಲೂಕ ಕಾರ್ಯ ನಿರ್ವಹಕ ಅಧಿಕಾರಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪೈಪ್ ಲೈನ್ ಲಿಕ್ ಆದಲ್ಲಿ ತಕ್ಷಣವೇ ದುರಸ್ತಿ ಬಗ್ಗೆ ಕಾರ್ಯನಿರ್ವಾಹಿಲು ತಿಳಿಸಿದ್ದಾರೆ ಇಂತಹ ಕೆಲಸಕ್ಕೆ ನಮ್ಮ ಜಿಲ್ಲಾಡಳಿತ ಸಂಪೂರ್ಣ ಕಾರ್ಯ ನಿರ್ವಹಿಸುತ್ತದೆ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಕೂಡ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಹಕರಿಸಿ ಇಂತಹ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕು ಈಗಾಗಲೆ ಮಳೆಗಾಲ ಆರಂಭವಾಗಿದ್ದು ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದರ ಜೊತೆಗೆ ಶುದ್ಧ ಕುಡಿಯುವ ನೀರು ಕುಡಿಯುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಹಾಯಕ ಆಯುಕ್ತರು ಶಾ ಅಲಂ ಹುಸೇನ್. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಮರೇಶ ನಾಯ್ಕ ಮತ್ತು ತಾಲೂಕು ಅಧಿಕಾರಿಗಳು ಪೆÇೀಲಿಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಯವರು ಇದ್ದರು.