ಹಿಮ್ಮಡಿ ಒಡೆಯುವುದನ್ನು ತಡೆಯಲು ಹೀಗೆ ಮಾಡಿ

ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ವಿನೆಗರ್
ಅಕ್ಕಿ ಹಿಟ್ಟು ಚರ್ಮ ಸುಲಿಯುವುದನ್ನು ತಡೆಯುತ್ತದೆ. ಇದು ಚರ್ಮವನ್ನು ಶುದ್ಧೀಕರಿಸುವುರ ಜೊತೆಗೆ ಮರು ಜೀವವನ್ನು ನೀಡುವುದು. ಜೇನುತುಪ್ಪ ನೈಸರ್ಗಿಕವಾದ ನಂಜು ನಿರೋಧಕವಾಗಿದ್ದು, ಅದು ಬಿರುಕು ಬಿಟ್ಟ ಪಾದಗಳನ್ನು ಗುಣಪಡಿಸಲು ಸಹಾಯ ಮಾಡುವುದು. ವಿನೆಗರ್ ಸೌಮ್ಯವಾದ ಆಮ್ಲ. ಅದು ಶುಷ್ಕ ಮತ್ತು ಸತ್ತ ಚರ್ಮವನ್ನು ಮೃದುಗೊಳಿಸುತ್ತದೆ. ಇದು ಚರ್ಮ ಸುಲಿಯುವುದನ್ನು ತಡೆಯುವುದು.
ಮೂರು ಟೀ ಚಮಚ ಅಕ್ಕಿ ಹಿಟ್ಟು
ಮೂರು ಹನಿ ಆಪಲ್ ಸೈಡರ್ ವಿನೆಗರ್.
ಒಂದು ಟೀ ಚಮಚ ಜೇನುತುಪ್ಪ.
ಬಳಸುವ ವಿಧಾನ
ಒಂದು ಬೌಲ್ ನಲ್ಲಿ ಚಮಚ ಅಕ್ಕಿ ಹಿಟ್ಟು, ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪವನ್ನು ಸೇರಿಸಿ, ಮೃದುವಾದ ಪೇಸ್ಟ್ ತಯಾರಿಸಿ. ಪಾದವನ್ನು ಬೆಚ್ಚಗಿನ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ನೆನೆಸಿಡಿ. ನಂತರ ಹಿಮ್ಮಡಿಗೆ ತಯಾರಿಸಿದ ಪೇಸ್ಟ್ ಅನ್ನು ಅನ್ವಯಿಸಿ, ಸ್ಕ್ರಬ್‍ ನಲ್ಲಿ ಉಜ್ಜಿ. ನಂತರ ಸ್ಚಚ್ಛವಾದ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಈ ಕ್ರಮವನ್ನು ಅನುಸರಿಸುವುದರಿಂದ ಹಿಮ್ಮಡಿಯು ಕೋಮಲತೆಯನ್ನು ಪಡೆದುಕೊಳ್ಳುವುದು.

ಬಾಳೆಹಣ್ಣು ನೈಸರ್ಗಿಕವಾದ ಮಾಯ್ಚುರೈಸ್ ಗುಣವನ್ನು ಪಡೆದುಕೊಂಡಿದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದು ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಕಾಪಾಡಿಕೊಳ್ಳುವುದು. ಹಿಮ್ಮಡಿ ಒಡೆಯದಂತೆ ರಕ್ಷಣೆ ನೀಡುವುದು.
ಬೇಕಾಗುವ ಸಾಮಾಗ್ರಿ
ಹಣ್ಣಾದ ಎರಡು ಬಾಳೆಹಣ್ಣನ್ನು ಒಂದು ಬೌಲ್ ಅಲ್ಲಿ ಕಿವುಚಿಕೊಳ್ಳಿ. ಕಿವುಚಿಕೊಂಡ ಬಾಳೆ ಹಣ್ಣನ್ನು ಪಾದಗಳಿಗೆ, ಬೆರಳುಗಳ ಮಧ್ಯೆ ಹಾಗೂ ಹಿಮ್ಮಡಿ ಸೇರಿದಂತೆ ಪಾದದ ಎಲ್ಲಾ ಭಾಗಗಳಿಗೆ ಅನ್ವಯಿಸಿ.
ಇಪ್ಪತ್ತು ನಿಮಿಷದ ಬಳಿಕ ಶುದ್ಧವಾದ ನೀರಿನಲ್ಲಿ ಪಾದವನ್ನು ನೆನೆಯಿಡಿ. ಪ್ರತಿದಿನ ಮಲಗುವ ಮುನ್ನ ಈ ಕ್ರಮವನ್ನು ಅನ್ವಯಿಸುವುದರಿಂದ ಪಾದದ ಆರೋಗ್ಯ ಉತ್ತಮವಾಗಿರುತ್ತದೆ.
ಜೇನುತುಪ್ಪ
ಜೇನುತುಪ್ಪ ನೈಸರ್ಗಿಕ ಹ್ಯೂಮೆಕ್ಟಂಟ್. ಇದು ಚರ್ಮದ ಒಳ ಹಾಗೂ ಹೊರ ಪ್ರದೇಶಗಳಿಗೆ ಹೆಚ್ಚಿನ ತೇವಾಂಶ ಒದಗಿಸುವುದು. ಚರ್ಮದ ಹೊರ ಪದರದಲ್ಲಿ ಉಬ್ಬುವುದು, ಒಡೆಯುವ ಸಮಸ್ಯೆಗಳನ್ನು ನಿಯಂತ್ರಿಸುವುದು.
ಬಳಸುವ ವಿಧಾನ: ಒಂದು ಟಬ್ ಅಲ್ಲಿ ಬೆಚ್ಚಗಿನ ನೀರಿಗೆ ಒಂದು ಕಪ್ ಜೇನುತುಪ್ಪವನ್ನು ಸೇರಿಸಿ. ಹತ್ತು ನಿಮಿಷಗಳ ಕಾಲ ಕಾಲನ್ನು ನೀರಿನಲ್ಲಿ ನೆನೆಸಿ. ನಂತರ ಇಪ್ಪತ್ತು ನಿಮಿಷಗಳ ಕಾಲ ಪಾದವನ್ನು ಮಸಾಜ್ ಮಾಡಿ.
ತಕ್ಷಣಕ್ಕೆ ಸ್ಕ್ರಬ್ ಅಲ್ಲಿ ಅಥವಾ ಪ್ಯೂಮಿಸ್ ಕಲ್ಲಿನಲ್ಲಿ ಮಸಾಜ್ ಮಾಡಿದರೆ ಸತ್ತ ಕೋಶಗಳು ಹಾಗೂ ಚರ್ಮ ನಿರ್ಮೂಲನೆಯಾಗುತ್ತವೆ. ಸ್ವಚ್ಛಗೊಂಡ ಪಾದ ಒಣಗಿದ ಮೇಲೆ ಮಾಯ್ಚುರೈಸ್ ಹಾಕಿ ಮಸಾಜ್ ಮಾಡಿ.
ರಾತ್ರಿ ಮಲಗುವ ಮುನ್ನ ಈ ಕ್ರಮ ಅನುಸರಿಸಿದರೆ ಬಹುಬೇಗ ಸಮಸ್ಯೆ ನಿವಾರಣೆ ಹೊಂದುವುದು. ನಂತರ ಕಾಲನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.
ಅಲೋವೆರಾ ಜೆಲ್
ಅಲೋವೆರಾ ಜೆಲ್ ವಿಟಮಿನ್ ಎ, ಸಿ ಮತ್ತು ಇ ಅನ್ನು ಒಳಗೊಂಡಿದೆ. ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವುದು. ಇದರ ಆರೈಕೆಯಿಂದ ಪಾದಗಳ ಆರೋಗ್ಯವನ್ನು ಕಾಪಾಡಬಹುದು. ಅಲ್ಲದೆ ಗಾಯವನ್ನು ಗುಣಪಡಿಸುವ ಗುಣವನ್ನು ಒಳಗೊಂಡಿದೆ.
ಬೆಚ್ಚಗಿನ ನೀರಿನಲ್ಲಿ ಪಾದವನ್ನು ನೆನೆಸಿ, ನಂತರ ಮೃದುವಾಗಿ ಮಸಾಜ್ ಮಾಡಿ. ಸತ್ತ ಜೀವಕೋಶಗಳನ್ನು ತೆಗೆದು, ಪಾದಗಳನ್ನು ತೊಳೆದು ಒಣಗಿಸಿಕೊಳ್ಳಿ. ನಂತರ ಅಲೋವೆರಾ ಜೆಲ್ ಅನ್ವಯಿಸಿ, ಸಾಕ್ಸ್ ಧರಿಸಿ ಮಲಗಿ.
ಮುಂಜಾನೆ ಕಾಲನ್ನು ಶುದ್ಧಗೊಳಿಸಿ. ಐದು ದಿನಗಳ ಕಾಲ ನಿರಂತರವಾಗಿ ಅನ್ವಯಿಸಿ. ನಂತರ ಉತ್ತಮ ಬದಲಾವಣೆಯನ್ನು ವೀಕ್ಷಿಸಿ.
ವ್ಯಾಸಲೀನ್ ಮತ್ತು ನಿಂಬೆ ರಸ
ವ್ಯಾಸಲಿನ್ ಮಾಯ್ಚುರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಂಬೆ ರಸವು ಸಿಟ್ರಿಕ್ ಗುಣವನ್ನು ಹೊಂದಿರುವುದರಿಂದ ಚರ್ಮದ ಮೇಲೆ ಸಿಪ್ಪೆ ಸುಲಿಯುವುದು ಮತ್ತು ಚರ್ಮದ ಕೋಶ ಪುನಃ ಬೆಳವಣಿಗೆಗೆ ಉತ್ತೇಜನ ನೀಡುವುದು.
ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದವನ್ನು ಇಪ್ಪತ್ತು ನಿಮಿಷಗಳ ಕಾಲ ನೆನೆಸಿ. ನಂತರ ಒಣಗಿದ ಬಟ್ಟೆಯಲ್ಲಿ ಒರೆಸಿ. ಒಂದು ಬೌಲ್ ಅಲ್ಲಿ ನಾಲ್ಕು ಹನಿಯಷ್ಟು ನಿಂಬೆ ರಸ ಹಾಗೂ ಒಂದು ಟೀ ಚಮಚ ವ್ಯಾಸಲೀನ್ ಬೆರೆಸಿ, ಮಿಶ್ರಗೊಳಿಸಿ.
ಮಿಶ್ರಣವನ್ನು ಪಾದ ಹಾಗೂ ಹಿಮ್ಮಡಿಯ ಜಾಗಕ್ಕೆ ಅನ್ವಯಿಸಿ. ಸಾಕ್ಸ್ ಧರಿಸಿ ಮಲಗಿ. ಮುಂಜಾನೆ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ನಿತ್ಯವೂ ಈ ಕ್ರಮವನ್ನು ಅನುಸರಿಸಿದರೆ ಸಮಸ್ಯೆ ನಿವಾರಣೆ ಹೊಂದುವುದು.