ಹಿಮೋಫಿಲಿಯಾ ಪೀಡಿತರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಬೀದರ:ಮೇ.2:ಹಿಮೋಫಿಲಿಯಾ ಸೊಸೈಟಿ ಮತ್ತು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ (ಬ್ರಿಮ್ಸ್) ಬೀದರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆ ಅಂಗವಾಗಿ ಹಿಮೋಫಿಲಿಯಾ ಪೀಡಿತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ
ಡಾ. ಮಹೇಶ ಬಿರಾದಾರ ಅವರು ಮಾತನಾಡಿ, ಹಿಮೋಫಿಲಿಯಾ ಪೀಡಿತರು ಯಾವುದೇ ಭಯಪಡುವ ಅಗತ್ಯವಿಲ್ಲ. ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಒಂದು ಸಸಿಯನ್ನು ನೆಟ್ಟಿದ ಮೇಲೆ ಅದಕ್ಕೆ ಸರಿಯಾದ ಸಮಯಕ್ಕೆ ತಕ್ಕಂತೆ ನೀರನ್ನು ನೀಡಿದರೆ, ಅದನ್ನು ಯಾವುದೇ ತೊಂದರೆ ಇಲ್ಲದಂತೆ ದೊಡ್ಡ ಮರವಾಗುತ್ತದೆ. ಅದೇ ರೀತಿ ಒಂದ ಹಿಮೋಫಿಲಿಯಾ ಪೀಡಿತ ಮಗುವನ್ನು ಸರಿಯಾದ ಸಮಯಕ್ಕೆ ಹಿಮೋಫಿಲಿಯಾ ಚುಚ್ಚು ಮದ್ದನ್ನು ನೀಡುತ್ತಾ ಬಂದರೆ, ಆ ಮಗುವನ್ನು ಯಾವುದೇ ರೀತಿ ವಿಕಲತೆಗೆ ಹೋಗುವುದಿಲ್ಲ. ಅದಕ್ಕಾಗಿ ಎಲ್ಲಾ ಹಿಮೋಫಿಲಿಯಾ ಮಕ್ಕಳನ್ನು ಸರಿಯಾದ ಸಮಯಕ್ಕೆ ನೋವಿದ್ದಾಗ ಹಿಮೋಫಿಲಿಯಾ ಚುಚ್ಚು ಮದ್ದು ನೀಡುತ್ತಿರಬೇಕು ಎಂದು ಜಾಗೃತಿ ಮೂಡಿಸಿದರು.
ಅದೇ ರೀತಿಯಾಗಿ ಮುಖ್ಯ ಉಗ್ರಾಣ ಅಧಿಕಾರಿಗಳಾದ ರವಿ ದಂಡೆಯವರು ಮಾತನಾಡಿ, ಹಿಮೋಫಿಲಿಯಾ ಸೊಸೈಟಿ ಜೊತೆ ಎಲ್ಲರು ಸರಿಯಾಗಿ ನೊಂದಣಿಯಾಗಿ, ನೀವೆಲ್ಲಾ ನೋಂದಣಿಯಾದರೆ ನಮಗೆ ಸರಿಯಾಗಿ ಮಾಹಿತಿ ಸಿಗುತ್ತದೆ. ಎಷ್ಟು ಔಷಧಿ ಬೇಕಾಗುತ್ತದೆ ಎಂದು ನಮ್ಮಲ್ಲಿ ಮಾಹಿತಿ ದೊರಕುತ್ತದೆ. ಹಿಮೋಫಿಲಿಯಾ ಸೊಸೈಟಿ ಕಾರ್ಯದರ್ಶಿಗಳಾದ ನಾಗೇಶ ಭೈರನಳ್ಳಿಯವರು ಮಾತನಾಡಿ, ಹಿಮೋಫಿಲಿಯಾ ಅಂದರೆ ಒಂದು ಜನಿಸಿದ ಮಗುವಲ್ಲಿ ಘಿ ವರಣತಂತುವಿನ ಸಮಸ್ಯೆ ಇದ್ದು, ರಕ್ತಸ್ರಾವದ ಸಮಸ್ಯೆ ಎದುರಾಗುತ್ತದೆ. ಇದರಿಂದ ಮಾನವನಲ್ಲಿ ಸರಿಯಾಗಿ ರಕ್ತ ನಿಲ್ಲುವುದಿಲ್ಲ, ಒಂದು ಚಿಕ್ಕ ಗಾಯವಾದರೂ ದೇಹದಿಂದ ಸಂಪೂರ್ಣ ರಕ್ತಸ್ರಾವವಾಗಿ ಸಾವಾಗಬಹುದು. ಅದೇ ರೀತಿ ವಿನಾಕರಣ ಕೀಲುಗಳಲ್ಲಿ ಕೂಡ ಊದುಕೊಳ್ಳುತ್ತವೆ. ಅದಕ್ಕಾಗಿ ತಾವೆಲ್ಲರೂ ಜೋಪಾನವಾಗಿ ಜೀವನ ನಡೆಸಬೇಕಾಗಿ ವಿನಂತಿಸಿದರು, ಯಾವುದೇ ರೀತಿ ಹೆದರದೇ ಯಾವ ಸಮಯದಲ್ಲಿ ನೋವು ಬರುತ್ತೋ ಆ ಸಮಯದಲ್ಲಿ ಹಿಮೋಫಿಲಿಯಾ ಚುಚ್ಚು ಮದ್ದನ್ನು ಹಾಕಿಕೊಳ್ಳಿ ಎಂದು ತಿಳಿಸಿದರು. ಈ ಮದ್ದುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಹಿಮೋಫಿಲಿಯಾ ಸೊಸೈಟಿ ಇವರಲ್ಲಿ ದೊರೆಯುತ್ತದೆ ಎಂದು ಹಿಮೋಫಿಲಿಯಾ ಪೀಡಿತರ ಗಮನಕ್ಕೆ ತಂದರು.
ಈ ಕಾರ್ಯಕ್ರಮದಲ್ಲಿ ಬ್ರಿಮ್ಸ್ ಸಿಬ್ಬಂದಿಗಳಾದ ಇಮಾನುವೇಲ್, ಅಮೃತ, ಸಂತೋಷ, ಅಲಿಮೊದ್ದೀನ್ ಹಾಗೂ ಹಿಮೋಫಿಲಿಯಾ ಪೀಡಿತರು ಹಾಗೂ ಪೆÇೀಷಕರು ಉಪಸ್ಥಿತರಿದ್ದರು.